Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮಂಗಳೂರು: ಕರಾವಳಿ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಗೆ ಬಂದ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಎಸ್ ಪಿಜಿ ಸಿಬ್ಬಂದಿ ಮೇಲೆ ಸಿಡಿಮಿಡಿಗೊಂಡ ಘಟನೆ ನಡೆದಿದೆ.
ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ತಂಗಿದ್ದ ರಾಹುಲ್ ಗಾಂಧಿ ಭೇಟಿಗೆ ಬಂದಾಗ ಅವರ ಭದ್ರತಾ ಸಿಬ್ಬಂದಿ ಪರಮೇಶ್ವರ್ ಕಾರು ತಡೆದು ತಪಾಸಣೆಗೆ ಮುಂದಾದರು. ಇದರಿಂದ ಕೋಪಗೊಂಡ ಪರಮೇಶ್ವರ್ ನನ್ನನ್ನು ಯಾರೆಂದುಕೊಂಡಿದ್ದೀರಿ? ಎಂದು ಸಿಟ್ಟಿನಿಂದಲೇ ಪ್ರಶ್ನಿಸಿದ್ದಾರೆ. ನಂತರ ಪರಮೇಶ್ವರ್ ವಾಹನವನ್ನು ಒಳಗೆ ಕಳುಹಿಸಲು ಭದ್ರತಾ ಸಿಬ್ಬಂದಿ ಅನುವು ಮಾಡಿಕೊಟ್ಟರು.
ಇದೇ ರೀತಿ ಸ್ಥಳೀಯ ಶಾಸಕ, ಸಚಿವ ಯುಟಿ ಖಾದರ್ ವಾಹನವನ್ನೂ ಎಸ್ ಪಿಜೆ ಸಿಬ್ಬಂದಿ ತಡೆದು ತಪಾಸಣೆಗೆ ಮುಂದಾಗಿದ್ದರು. ಆದರೆ ಅದಕ್ಕೆ ಸಚಿವ ಖಾದರ್ ಅವಕಾಶ ಮಾಡಿಕೊಡಲಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ