Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ದತೆಯು ಭರದಿಂದ ಸಾಗುತ್ತಿದ್ದು, ಐತಿಹಾಸಿಕ ಹಂಪಿ ಸ್ಮಾರಕವು ಸಹ ಸ್ವಾತಂತ್ರ್ಯ ದಿನಾಚರಣೆಗೆ ಕಂಗೊಳ್ಳಿಸಲು ಸಕಲ ಸಿದ್ದತೆ ನಡೆಸಿದೆ. ಆಜಾದಿಕಾ ಅಮೃತ ಮಹೋತ್ಸವ ಹಿನ್ನೆಲೆ ದಕ್ಷಿಣ ಕಾಶಿ ಹಂಪಿಯ ವಿಜಯ ವಿಠ್ಠಲ ದೇಗುಲದ ಬಳಿ ಇರೋ ಕಲ್ಲಿನ ತೇರು, ಸಪ್ತ ಸ್ವರ ಮಂಟಪ ಸೇರಿದಂತೆ ನಾನಾ ಸ್ಮಾರಕಗಳನ್ನು ತ್ರಿವರ್ಣಧ್ವಜದ ವಿದ್ಯುತ್ ದೀಪಾಲಂಕಾರದಿಂದ ಅಲಂಕರಿಸಿದ್ದು, ನೋಡುಗರ ಕಣ್ಣಿಗೆ ಮುದನೀಡಿದೆ.ಈ ಅದ್ಭುತ ದೃಶ್ಯಗಳು ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೋಡುಗರ ಕಣ್ಣಿಗೆ ಹಬ್ಬವಾಗಿದೆ.