Publish Date: Sun, 10 Apr 2022 (19:54 IST)
Updated Date: Sun, 10 Apr 2022 (19:57 IST)
ಸ್ಯಾಂಡಲ್ವುಡ್ ನಟ ರಾಘವೇಂದ್ರ ರಾಜ್ಕುಮಾರ್ ಮತ್ತೆ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರೋ ನಟ ಈಗ ವಿಶೇಷ ಪಾತ್ರಗಳ ಮೂಲಕ ಸಾಲು ಸಾಲು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಈಗ `13′ ಅನ್ನೋ ಹೊಸ ಸಿನಿಮಾದಲ್ಲಿ ರಾಘವೇಂದ್ರ ರಾಜ್ಕುಮಾರ್ ನಟಿಸುತ್ತಿದ್ದಾರೆ. 13 ಎಂಬ ಚಿತ್ರದಲ್ಲಿ ಗುಜರಿ ಅಂಗಡಿಯ ಮಾಲೀಕನ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಟ ರಾಘಣ್ಣ ಜೊತೆ ಪ್ರಮುಖ ಪಾತ್ರದಲ್ಲಿ ನಟಿ ಶ್ರುತಿ ಕಾಣಿಸಿಕೊಳ್ತಿದ್ದಾರೆ. ಮುಸ್ಲಿಂ ಧರ್ಮದ ಮಹಿಳೆಯಾಗಿ ಶ್ರುತಿ ನಟಿಸಲಿದ್ದಾರೆ. ಹಿಂದೂ ಹುಡುಗ ಮತ್ತು ಮುಸ್ಲಿಂ ಹುಡುಗಿಯ ಭಿನ್ನ ಕಥೆಯಿರೋ ಸಿನಿಮಾದಲ್ಲಿ ರಾಘವೇಂದ್ರ ರಾಜ್ಕುಮಾರ್ ನಟಿಸುತ್ತಿದ್ದು, ಎಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ನಟಿಸಲಿದ್ದಾರೆ. ಸಾಕಷ್ಟು ಕಾರಣಗಳಿಂದ 13 ಚಿತ್ರ ನಿರೀಕ್ಷೆ ಮೂಡಿಸಿದೆ. ಈ ಚಿತ್ರಕ್ಕೆ ನರೇಂದ್ರ ಬಾಬು ಡೈರೆಕ್ಷನ್ ಮಾಡುತ್ತಿದ್ದಾರೆ.
geetha
Publish Date: Sun, 10 Apr 2022 (19:54 IST)
Updated Date: Sun, 10 Apr 2022 (19:57 IST)