Publish Date: Sun, 10 Apr 2022 (19:49 IST)
Updated Date: Sun, 10 Apr 2022 (19:52 IST)
ಪಾಕಿಸ್ತಾನ ಸಂಸತ್ನಲ್ಲಿ ಶನಿವಾರ ತಡರಾತ್ರಿ ದೊಡ್ಡ ಹೈಡ್ರಾಮಾವೇ ನಡೆಯಿತು. ವಿಶ್ವಾಸಮತ ಗಳಿಸುವಲ್ಲಿ ವಿಫಲರಾದ ಇಮ್ರಾನ್ ಖಾನ್ ಅಧಿಕಾರ ಅಂತ್ಯವಾಗಿದೆ. ಅಧಿಕಾರ ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಕಸರತ್ತು ನಡೆಸಿದ್ದ ಇಮ್ರಾನ್ ಖಾನ್ ಅವರ 4 ವರ್ಷಗಳ ಅಧಿಕಾರವನ್ನು ಕಳೆದುಕೊಂಡಿದ್ದಾರೆ. ಈ ಮೂಲಕ ಇಮ್ರಾನ್ ಖಾನ್ ಅವರು ಅವಿಶ್ವಾಸ ಮತದಲ್ಲಿ ಸೋತ ಪಾಕಿಸ್ತಾನದ ಮೊದಲ ಪ್ರಧಾನಿಯಾಗಿದ್ದಾರೆ. ಸದನದಲ್ಲಿ ಹಾಜರಿದ್ದ ಪ್ರತಿಪಕ್ಷಗಳ 176 ಹಾಗೂ ಆಡಳಿತ ಪಕ್ಷದ 22 ಸದಸ್ಯರು ನಿರ್ಣಯದ ಪರವಾಗಿ ಮತ ಹಾಕಿದರು. ಇದಕ್ಕೂ ಮುನ್ನ ದಿನವಿಡೀ ಪಾಕಿಸ್ತಾನದಲ್ಲಿ ಹೈಡ್ರಾಮವೇ ನಡೆದಿದೆ.
geetha
Publish Date: Sun, 10 Apr 2022 (19:49 IST)
Updated Date: Sun, 10 Apr 2022 (19:52 IST)