ಸಿಎಂ ಹಾಗೂ ಡಿಸಿಎಂ ಇಬ್ಬರು ಸೇರಿ ಜವಾಬ್ದಾರಿ ಕೊಟ್ಟಿದ್ದಾರೆ.ಪರಿಶಿಷ್ಟ ಪಂಗಡ ಕಲ್ಯಾಣ , ಯುವಜನ ಕ್ರೀಡಾ ಸಚಿವನಾಗಿ ರಾಜ್ಯದಲ್ಲಿ ಸೇವೆಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.ಕ್ರೀಡೆಯಲ್ಲಿ ಅದ್ಬುತ ಅವಕಾಶಗಳಿವೆ .ಈ ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಕೆಲಸಗಳನ್ನ ಹಾಗೂ ಯುವ ಜನತೆಗೆ ಅಸಕ್ತಿ ಹೊಂದಿರುವ ಕ್ರೀಡೆಯಲ್ಲಿ ಒಳ್ಳೆಯ ಅವಕಾಶ ರಾಜ್ಯ ಸರ್ಕಾರ ಕಲ್ಪಿಸಿಕೊಡುತ್ತೆ ಎಂದು ಸಚಿವ ನಾಗೇಂದ್ರ ಹೇಳಿದ್ರು
ಅಧಿಕಾರ ವರ್ಗ ನಾನು ಸೇರಿ ಜೋಡೆತ್ತುಗಳ ರೀತಿಯಲ್ಲಿ ಎರಡು ಇಲಾಖೆಯನ್ನ ನಡೆಸಿಕೊಂಡು ಹೋಗ್ತಿವಿಸಿಎಂ ಅವರು ಇಟ್ಟಿರುವ ನಂಬಿಕೆಯನ್ನ ಶಕ್ತಿಮೀರಿ ಉಳಿಸಿಕೊಳ್ತಿನಿ ಎಂದು ಹೇಳಿದ್ರು.ಅಲ್ಲದೇ ಈ ವೇಳೆ ಗ್ಯಾರಂಟಿ ಗೋಷಣೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು,ನಿನ್ನೆ ನಡೆದ ಸಭೆಯಲ್ಲಿ ಸಿಎಂ ಉತ್ತರ ಕೊಡ್ತಿವಿ ಅಂತಾ ಹೇಳಿದ್ದಾರೆ.ಗ್ಯಾರಂಟಿಗಳನ್ನ ಗ್ಯಾರಂಟಿಯಾಗಿ ಕೊಟ್ಟೆ ಕೊಡ್ತಿವಿ.ಹಣವನ್ನ ಯಾವ ರೀತಿ ಒದಗಿಸಬೇಕಂತ ಇಲಾಖೆಯ ಅಧಿಕಾರಿಗಳ ಜೊತೆ ಸಿಎಂ ಸಭೆ ಮಾಡಿದ್ದಾರೆ.
ಜಿಲ್ಲಾ ಉಸ್ತುವಾರಿ ವಿಚಾರವಾಗಿ ನನ್ನ ಜಿಲ್ಲೆಯಲ್ಲಿ ನಾನು ಒಬ್ಬನೇ ಇದ್ದೇನೆ .ನನಗೆ ಕೊಡ್ತಾರೆ ಎಂಬ ನಂಬಿಕೆ ಇದೆ.ಉಸ್ತುವಾರಿ ಕೊಡುವುದು ಸಿಎಂ ವಿವೇಚನೆಗೆ ಬಿಟ್ಟಿದ್ದು.ಯಾವ ಅಧಿಕಾರ ಕೊಟ್ರು ನಿಷ್ಟೆಯಿಂದ ಕೆಲಸ ಮಾಡ್ತಿನಿ ಎಂದು ಸಚಿವ ನಾಗೇಂದ್ರ ಹೇಳಿದ್ದಾರೆ.