Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಜ್ಜ-ಅಜ್ಜಿಯ ಪ್ರೇಮ್ ಕಹಾನಿ!

ಅಜ್ಜ-ಅಜ್ಜಿಯ ಪ್ರೇಮ್ ಕಹಾನಿ!
ಮಂಡ್ಯ , ಶುಕ್ರವಾರ, 3 ಡಿಸೆಂಬರ್ 2021 (10:45 IST)
ಮಂಡ್ಯ : ಮೈಸೂರಿನ ಹೆಬ್ಬಾಳದ ಚಿಕ್ಕಣ್ಣ ಅವರ ಸೋದರತ್ತೆ ಮಗಳಾದ ಜಯಮ್ಮ ಅವರ ಮೇಲೆ 35 ವರ್ಷಗಳ ಹಿಂದೆ ಪ್ರೀತಿ ಚಿಗುರಿತ್ತು.
ಆದರೆ ಚಿಕ್ಕಣ್ಣನ ಪ್ರೀತಿಗೆ ಜಯಮ್ಮ ಹಾಗೂ ಕುಟುಂಬಸ್ಥರು ಒಪ್ಪಿರಲಿಲ್ಲ. ಹೀಗಾಗಿ ಜಯಮ್ಮ ಅವರನ್ನು ಬೇರೊಬ್ಬರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಆದರೆ ಇತ್ತ ಚಿಕ್ಕಣ್ಣ ಯಾರನ್ನು ಮದುವೆಯಾಗದೇ ಜಯಮ್ಮಳಿಗಾಗಿ ಇಷ್ಟು ವರ್ಷಗಳ ಕಾಲ ಕಾದಿದ್ದರು.
ಇದೀಗ ಜಯಮ್ಮ ಕಳೆದ ನಾಲ್ಕೈದು ವರ್ಷಗಳಿಂದ ತನ್ನ ಗಂಡನ ಜೊತೆ ಮನಸ್ಥಾಪ ಬಂದ ಕಾರಣ ದೂರ ಉಳಿದಿದ್ದರು. ಇದೀಗ ಹಳೆಯ ಪ್ರಿಯತಮ ಚಿಕ್ಕಣ್ಣ ಅವರ ಪ್ರೀತಿಯನ್ನು ಜಯಮ್ಮ ಒಪ್ಪಿಕೊಂಡಿದ್ದಾರೆ. ಹೀಗಾಗಿ ಇಂದು ಈ ಜೋಡಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ನವಜೀವನಕ್ಕೆ ಕಾಲಿಟ್ಟಿದೆ. 
ಈ ಮೂಲಕ ಇಷ್ಟು ವರ್ಷಗಳಿಂದ ತಮ್ಮ ಪ್ರಿಯತಮೆಗಾಗಿ ಕಾದಿದ್ದ ಚಿಕ್ಕಣ್ಣನ ಪ್ರೀತಿಗೆ ಜಯ ಸಿಕ್ಕಿದ್ದು, ಪ್ರಿಯತಮೆಯನ್ನು 35 ವರ್ಷಗಳ ಬಳಿಕ ಮದುವೆಯಾದ ಚಿಕ್ಕಣ್ಣನ ಸಂತಸಕ್ಕೆ ಪಾರವೇ ಇರಲಿಲ್ಲ.
 


Share this Story:

Follow Webdunia kannada

ಮುಂದಿನ ಸುದ್ದಿ

ಒಡಿಶಾಗೆ ಅಪ್ಪಳಿಸಲಿರುವ ಜವಾದ್ ಚಂಡಮಾರುತ !