Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮದುವೆಯೇ ಆಗಲ್ವಂತೆ ವಿಕ್ಕಿ-ಕತ್ರಿನಾ ಜೋಡಿ!

ಮದುವೆಯೇ ಆಗಲ್ವಂತೆ ವಿಕ್ಕಿ-ಕತ್ರಿನಾ ಜೋಡಿ!
ಮುಂಬೈ , ಭಾನುವಾರ, 28 ನವೆಂಬರ್ 2021 (09:10 IST)
ಮುಂಬೈ: ಬಾಲಿವುಡ್ ಜೋಡಿ ವಿಕ್ಕಿ ಕೌಶಾಲ್, ಕತ್ರಿನಾ ಕೈಫ್ ಡಿಸೆಂಬರ್ ನಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದೀಗ ಇಬ್ಬರೂ ಮದುವೆಯೇ ಆಗುತ್ತಿಲ್ಲ ಎಂದು ವಿಕ್ಕಿ ಸಂಬಂಧಿಕರೊಬ್ಬರು ಹೇಳಿಕೆ ನೀಡಿದ್ದು, ಅಭಿಮಾನಿಗಳಿಗೆ ಶಾಕ್ ನೀಡಿದೆ.

ಡಿಸೆಂಬರ್ ರನಲ್ಲಿ ಇಬ್ಬರೂ ರಾಜಸ್ಥಾನ್ ನಲ್ಲಿ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ. ಇದಕ್ಕೆ ಎಲ್ಲಾ ತಯಾರಿಗಳು ನಡೆದಿವೆ ಎಂಬ ವರದಿಗಳ ಬೆನ್ನಲ್ಲೇ ವಿಕ್ಕಿ ಸಹೋದರ ಸಂಬಂಧಿ ಡಾ. ಉಪಾಸನಾ ಇದೆಲ್ಲಾ ಮಾಧ್ಯಮಗಳ ರೂಮರ್ ಎಂದಿದ್ದಾರೆ.

‘ಇಬ್ಬರೂ ಮದುವೆಯೇ ಆಗುತ್ತಿಲ್ಲ. ಇದೆಲ್ಲಾ ಮಾಧ‍್ಯಮಗಳಲ್ಲಿ ಹರಿದಾಡುತ್ತಿರುವ ಗಾಸಿಪ್ ಅಷ್ಟೇ. ಇತ್ತೀಚೆಗೆ ಬಾಲಿವುಡ್ ಸೆಲೆಬ್ರಿಟಿಗಳ ಬಗ್ಗೆ ರೂಮರ್ ಗಳು ಹರಿದಾಡುವುದು ಹೊಸದೇನಲ್ಲ. ಮದುವೆಯಾಗುವುದಿದ್ದರೆ ಇಬ್ಬರೂ ಅಧಿಕೃತವಾಗಿ ಹೇಳಿಕೆ ನೀಡುತ್ತಾರೆ’ ಎಂದಿದ್ದಾರೆ. ಹೀಗಾಗಿ ಅವರ ಮದುವೆ ತಯಾರಿ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳಿಗೆ ಬ್ರೇಕ್ ಬಿದ್ದಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಟಿ ವಂಚಕನ ಜೊತೆ ರೊಮ್ಯಾನ್ಸ್: ನಟಿ ಜಾಕ್ವೆಲಿನ್ ಫೋಟೋ ವೈರಲ್