Publish Date: Wed, 06 Dec 2023 (17:00 IST)
Updated Date: Wed, 06 Dec 2023 (18:17 IST)
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕೇಂದ್ರ ಸರ್ಕಾರದ ಬರ ಪರಿಹಾರಕ್ಕೆ ಕಾಯದೆ ಸಮೀಕ್ಷೆ ನಡೆಸಿದ ಒಂದೆರಡು ತಿಂಗಳಲ್ಲೇ ರೈತರಿಗೆ NDRF ನಿಯಮದ ದರಕ್ಕಿಂತ ದುಪ್ಪಟ್ಟು ಬೆಳೆ ಪರಿಹಾರವನ್ನು ರೈತರಿಗೆ ನೀಡಿದ್ದೆವು.
ನಿಮಗೇನು ಸಮಸ್ಯೆ, ತೋರಿಕೆಗಷ್ಟೆ ರೈತರಿಗೆ ತಲಾ 2000 ರು. ತಾತ್ಕಾಲಿಕ ಬೆಳೆ ನಷ್ಟ ಪರಿಹಾರ ಘೋಷಿಸಿರುವುದು ಅವಮಾನಕರ. ಸರ್ಕಾರ ಕೂಡಲೇ ರೈತರ ಬೆಳೆ ನಷ್ಟಕ್ಕೆ ಮೂರು ಪಟ್ಟು ಪರಿಹಾರ ಘೋಷಿಸಬೇಕು ಅಂತಾ ವಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ.