Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪಾಲಿಕೆ ಅದಾಯ ಹೆಚ್ಚಿಸಿ ಕೊಳ್ಳಲು ಸರ್ಕಾರದಿಂದ ಹೊಸ ಪ್ಲಾನ್

ಪಾಲಿಕೆ ಅದಾಯ ಹೆಚ್ಚಿಸಿ ಕೊಳ್ಳಲು ಸರ್ಕಾರದಿಂದ ಹೊಸ ಪ್ಲಾನ್
bangalore , ಸೋಮವಾರ, 7 ಆಗಸ್ಟ್ 2023 (19:30 IST)
ಗ್ಯಾರಂಟಿ ಯೋಜನೆಗೆ ಬೇಕಾದ ಅದಾಯ ದಕ್ಕಿಸಿಕೊಳ್ಳಲು ಸರ್ಕಾರ ಚಿಂತನೆ ನಡೆಸ್ತಿದ್ದು,ಖಜಾನೆ ಭರ್ತಿ ಮಾಡಲು ಮತ್ತೆ ಜಾಹೀರಾತು ಮೊರೆ ಕಾಂಗ್ರೇಸ್ ಸರ್ಕಾರ ಹೋಗಿದೆ.ಬಿಬಿಎಂಪಿ ಕಾಯ್ದೆ-2020 ಅನ್ವಯ ಜಾಹಿರಾತು ನಿಯಮ ಜಾರಿಗೆ ಚಿಂತನೆ ನಡೆಸಿದೆ.ಶೀಘ್ರದಲ್ಲಿ ಹೊಸ ರೂಪದಲ್ಲಿ ಜಾಹೀರಾತು ಬೈಲಾ ಜಾರಿಯಾಗಲಿದೆ.ಇದೇ ತಿಂಗಳು 7 ರಂದು ಜಾಹೀರಾತು ಬಗ್ಗೆ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳ ಸಭೆ ನಡೆಯಲಿದೆ.
 
 
ಜಾಹೀರಾತು ಮಾಫಿಯಾಗೆ ರತ್ನಗಂಬಳಿ ಹಾಸಿದ್ಯಾ ರಾಜ್ಯ ಸರ್ಕಾರ?ಬೆಂಗಳೂರನ್ನೇ ಆಳಿದ್ದ ಜಾಹೀರಾತು ಮಾಫಿಯಾಗೆ ಸರ್ಕಾರ ಮತ್ತೆ ಮಣೆ ಹಾಕುತ್ತಾ?ಅನಧಿಕೃತ ಫ್ಲೆಕ್ಸ್ , ಬ್ಯಾನರ್ ಹಾವಳಿ ತಪ್ಪಿಸಲು ಸರ್ಕಾರ ಮತ್ತೆ ಜಾಹೀರಾತು ಕಾಯ್ದೆಗೆ ಹೊಸ ರೂಪ ಕೊಡ್ತಿದ್ಯಾ?ಅನಧಿಕೃತ ಜಾಹೀರಾತಿಗೆ ಕಡಿವಾಣ ಹಾಕಿ, ಬಿಬಿಎಂಪಿ ಖಜಾನೆ ಭರ್ತಿ ಮಾಡಲು ಜಾಹೀರಾತು ಬೈಲಾಕ್ಕೆ ತಿದ್ದುಪಡಿ ಮಾಡಲಾಗ್ತಿದ್ದು,ರಾಜ್ಯ ಸರ್ಕಾರ ಈಗಾಗಲೇ ಹೊಸ ಜಾಹೀರಾತು ನಿಯಮದ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಿದೆ.
 
ಹೈಕೋರ್ಟ್ ಆದೇಶ ಹಾಗೂ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಜಾಹೀರಾತು ಪ್ರದರ್ಶನ ಸಂಪೂರ್ಣ ನಿಷೇಧಿಸಲಾಗಿತ್ತು.ಅದ್ರು ಕೂಡ ರಾಜಕೀಯ ಪಕ್ಷಗಳು ಸೇರಿ ಖಾಸಗಿಯವರು ಎಲ್ಲೆಂದರಲ್ಲಿ ಫ್ಲೆಕ್ಸ್ ,ಬ್ಯಾನರ್‌ಗಳನ್ನು ಅಳವಡಿಸ್ತಿದ್ರು.ಹೊಸ ಜಾಹೀರಾತು ನೀತಿಗೆ ಸ್ವಪಕ್ಷದ ಶಾಸಕರಿಂದಲೂ ಒತ್ತಡ ಕೇಳಿಬಂದಿದ್ದು,ಈಗ ಸರ್ಕಾರ ಹೊಸ ಜಾಹೀರಾತು ನಿಯಮ ಜಾರಿಯಾದ್ರೆ ಸರ್ಕಾರದ ಖಜಾನೆಗೆ 1ಸಾವಿರ ಕೋಟಿ ವಾರ್ಷಿಕ  ಆದಾಯದ ನಿರೀಕ್ಷೆ ಇದೆ.
 
ಇನ್ನೂ ಹೊಸ ಜಾಹೀರಾತು ಕಾಯ್ದೆಯಲ್ಲಿ ಎನ್ನೆಲ್ಲ ಮಾನದಂಡಗಳು ಇರುತ್ತೆ ಅಂತ ನೋಡೋದಾದ್ರೆ
 
ಮಾನದಂಡಗಳೇನು?
 
-  ನಗರದಲ್ಲಿ ಯಾವ ಯಾವ ಪ್ರದೇಶದಲ್ಲಿ ಅವಕಾಶ ನೀಡಬೇಕು ?
 
-  ಎಷ್ಟು ದರ  ನಿಗದಿ ಮಾಡಬೇಕು?
 
 
-  ಸದ್ಯ ಇರೋ ಪಿಪಿಪಿ ಮಾಡೆಲ್ ಗೆ ಯಾವ ನೀತಿ ಇರಬೇಕು ?
 
 
- ಹೋಲ್ಡಿಂಗ್ ಗಳಿಗೆ ಪ್ರತ್ಯೇಕ ನಿಯಮ ಜಾರಿ
 
- ಬಿಬಿಎಂಪಿಯಿಂದಲೇ ಜಾಹೀರಾತು ಸ್ಥಳ ನಿಗದಿ
 
- ಪ್ರತಿ ಜಾಹೀರಾತು ಹೋರ್ಡಿಂಗ್‌ಗೂ ಪ್ರತ್ಯೇಕ ಆರ್‌ಎಫ್‌ಐಡಿ ಸಂಖ್ಯೆ ನಿಗದಿ
 
 
- ನಿಗದಿತ ಹೋರ್ಡಿಂಗ್ ಗೆ ಜಿಪಿಎಸ್ ಅಳವಡಿಕೆಗೆ ತೀರ್ಮಾನ
 
 
- ನಿರ್ದಿಷ್ಟ ಜಾಹೀರಾತು ಫಲಕಕ್ಕೆ ಮಾತ್ರ ಅನುಮತಿಗೆ ತೀರ್ಮಾನ
 
 
-  ಹರಾಜಿನ ಮೂಲಕ ಜಾಹೀರಾತು ಪ್ರದರ್ಶಕರಿಗೆ ಅನುಮತಿ

Share this Story:

Follow Webdunia kannada

ಮುಂದಿನ ಸುದ್ದಿ

ಲಾಲ್ ಬಾಗ್ ಪ್ಲವರ್ ಶೋಗೆ ಹೋಗುತ್ತಿದ್ದೀರಾ..?ಈ ಸುದ್ದಿ ನೋಡಿ