Publish Date: Sat, 25 Dec 2021 (15:30 IST)
Updated Date: Sat, 25 Dec 2021 (15:33 IST)
ನಿರ್ದೇಶಕ ನಾಗಶೇಖರ್ 50 ಲಕ್ಷ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಡಿಸಿಪಿ ಸಂಜೀವ್ ಪಾಟೀಲ್ ಪ್ರತಿಕ್ರಿಯೆ ನೀಡಿದರು. 50 ಲಕ್ಷ ವಂಚನೆಯಾಗಿದೆ ಅಂತ ಆರೋಪಿಸಿ ಕನ್ನಡದ ಸ್ಟಾರ್ ನಿರ್ದೇಶಕ ನಾಗಶೇಖರ್ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ದೂರು ನೀಡಿದ್ದರು.
ಡಿಸಿಪಿ ಆರ್.ಆರ್ ನಗರದ ಜಯಣ್ಣಲೇಔಟ್ ನಲ್ಲಿ ಮನೆ ಖರೀದಿಸಲು ಮುಂದಾಗಿದ್ದ ನಾಗಶೇಖರ್, ಕಳೆದ 2020 ರ ಆಗಸ್ಟ್ ನಲ್ಲಿ ಮನೆ ಖರೀದಿ ಸಂಬಂಧ ಮೀನಾರ ಎಂಬುವವರ ಜೊತೆ,
2 ಕೋಟಿ 70 ಸಾವಿರಕ್ಕೆ ಸೇಲ್ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ. ಬಳಿಕ ಅಗ್ರಿಮೆಂಟ್ ಆಗ್ತಿದ್ದಂತೆ ಹಂತ ಹಂತವಾಗಿ ಮೀನಾರ ಖಾತೆಗೆ 50 ಲಕ್ಷ ರೂಪಾಯಿಯನ್ನ ನಾಗಶೇಖರ್ ವರ್ಗಾಯಿಸಿದ್ದಾರೆ. ಆದ್ರೆ ಸೇಲ್ ಅಗ್ರಿಮೆಂಟ್ ನಂತರ ಮತ್ತೊಬ್ಬರಿಗೆ ಮನೆ ಮಾರಾಟ ಮಾಡಿರೋ ಮೀನಾ, ಅಡ್ವಾನ್ಸ್ ಪಡೆದ 50 ಲಕ್ಷ ಹಣ ಹಿಂದಿರುಗಿಸಲು ಖ್ಯಾತೆ ತೆಗೆದಿದ್ದಾರೆ ಎಂದು ತಿಳಿಸಿದರು. ಈ ಸಂಬಂಧ R.R ನಗರ ಪೊಲೀಸ್ ಠಾಣೆಯಲ್ಲಿ ಎಫ್. ಐ. ಆರ್ ದಾಖಲಾಗಿದ್ದು ಮೀನಾ ರಾಜುಕುಮಾರ್ ನಾಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
geetha
Publish Date: Sat, 25 Dec 2021 (15:30 IST)
Updated Date: Sat, 25 Dec 2021 (15:33 IST)