ಬೆಂಗಳೂರು : ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ನೀಡುವ ಯೋಜನೆಗೆ ವಿವಿಧ ಮಠಾಧೀಶರು ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರ ಈ ಯೋಜನೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದರು.ರಾಜ್ಯ ಸರ್ಕಾರ ಕೂಡಲೇ ಮೊಟ್ಟೆ ವಿತರಣೆ ಆದೇಶ ವಾಪಸ್ ಪಡೆಯಬೇಕು ಎಂದು ಪ್ರತಿಭಟಿಸಿದ್ದರು.
ಇದೀಗ ಮೊಟ್ಟೆ ತಿನ್ನದ ಮಕ್ಕಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಶಾಲೆಯಲ್ಲಿ ಮೊಟ್ಟೆಯ ಬದಲಿಗೆ ಬಾಳೆಹಣ್ಣು ನೀಡುವುದರ ಜೊತೆಗೆ ಶೇಂಗಾಚಿಕ್ಕಿ ನೀಡಲು ಸರ್ಕಾರ ತೀರ್ಮಾನಿಸಿದೆ.
ಕಲ್ಯಾಣ ಕರ್ನಾಟಕ ಭಾಗದ 1-8 ನೇ ತರಗತಿ ಸರ್ಕಾರಿ ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ವಿತರಣೆಗೆ ರಾಜ್ಯ ಸರ್ಕಾರ ನಿರ್ಧರಿಸಿತ್ತು. ಈ ವಿಚಾರ ಭಾರೀ ಚರ್ಚೆಗೆ ಕಾರಣವಾದ ಹಿನ್ನೆಲೆ ಮೊಟ್ಟೆ ಸೇವಿಸಿದ ಮಕ್ಕಳಿಗೆ ಬಾಳೆಹಣ್ಣು ವಿತರಿಸುವುದಾಗಿ ಸರ್ಕಾರ ತಿಳಿಸಿತ್ತು. ಇದೀಗ ಮೊಟ್ಟೆ ಸೇವಿಸಿದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ಹಾಗೂ ಶೇಂಗಾಚಿಕ್ಕಿ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಮೊಟ್ಟೆ ತಿನ್ನಲು ನಿರಾಕರಿಸಿದ ಮಕ್ಕಳಿಗೆ ಬಾಳೆಹಣ್ಣಿನ ಜೊತೆ ಶೇಂಗಾಚಿಕ್ಕಿ ನೀಡಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡಿರುವ ಹಿನ್ನೆಲೆ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ.
ಇತ್ತೀಚೆಗೆ ಶಾಲೆಗಳಲ್ಲಿ ಮೊಟ್ಟೆ ನೀಡುವ ವಿಚಾರಕ್ಕೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದರು. ''ಮೊಟ್ಟೆ ಪೌಷ್ಟಿಕ ಆಹಾರವೆಂದು ಸಂಶೋಧನೆಗಳಿಂ ತಿಳಿದು ಬಂದಿದೆ. ಹಾಗಾಗಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಮೊಟ್ಟೆ ನೀಡುತ್ತಿದೆ'' ಎಂದು ಅವರು ಹೇಳಿದ್ದಾರೆ. ಆಹಾರ ಪದ್ಧತಿ ಅವರವರ ಇಷ್ಟ , ಕೆಲವರು ಹಾಲು ಮೊಸರು ತೆಗೆದುಕೊಳ್ಳುವುದಿಲ್ಲ. ಇನ್ನೂ ಕೆಲವರು ಮೊಟ್ಟೆಯನ್ನು ಮಾತ್ರ ತಿನ್ನುತ್ತಾರೆ. ಅವರವರ ಆಹಾರ ಪದ್ಧತಿ ಅವರ ಇಷ್ಟ. ಧಾರ್ಮಿಕ, ಧರ್ಮದ ನಂಬಿಕೆ ಅವರವರ ಇಷ್ಟವಾಗಿರುತ್ತದೆ. ಅಲ್ಲದೇ ಸರ್ಕಾರ ಯಾವುದನ್ನೂ ಬಲವಂತವಾಗಿ ಹೇರುವುದಿಲ್ಲ ಎಂದು ಸಚಿವ ಸುಧಾಕರ್ ಹೇಳಿದ್ದರು,
ಸರ್ಕಾರ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆಯನ್ನ ರಾಜ್ಯ ಸರ್ಕಾರ ಕೂಡಲೇ ಹಿಂತೆಗೆದುಕೊಳ್ಳಬೇಕು. ಮೊಟ್ಟೆ ಪೂರ್ಣವಾಗಿ ಮಾಂಸಹಾರವಾಗಿದ್ದು, ಶಾಲಾ ಮಟ್ಟದಿಂದ್ಲೆ ಮಕ್ಕಳಿಗೆ ಈ ಪದ್ಧತಿ ಕಲಿಸಬಾರದು. ಮಕ್ಕಳಿಗೆ ಮೊಟ್ಟೆ ಬದಲಾಗಿ ದ್ವಿಗಳ ಧಾನ್ಯಗಳನ್ನ ನೀಡಬೇಕು. ಇನ್ನು ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು ಎಂದು ವಿವಿಧ ಮಠದ ಸ್ವಾಮೀಜಿಗಳು ಆಗ್ರಹಿಸಿದ್ದರು.