ಬಾಳೆಹಣ್ಣು ಎಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ. ಆರೋಗ್ಯಕ್ಕೆ ಅಷ್ಟೇ ಎಲ್ಲ ಸೌದರ್ಯಕ್ಕೂ ಪೂರಕವಾದ ಹಣ್ಣಾಗಿದೆ.
ಹಲವಾರು ರೀತಿಯ ಬಜ್ಜಿಯನ್ನು ಇಷ್ಟುಪಟ್ಟು ತಿನ್ನುತ್ತೇವೆ. ಅದೇ ರೀತಿಯ ಹೊಸದಾದ ಹಾಗೂ ಎಲ್ಲರಿಗೂ ಸೊಜಿಗವೆನಿಸಬಹುದು! ಆದರೆ ಇದು ಬಾಯಿಗೆ ಹೊಸ ರುಚಿಯನ್ನು ಕೊಡುತ್ತದೆ. ನೀವು ಕೂಡ ಈ ಕೆಳಗಿನಂತೆ ಟ್ರೈ ಮಾಡಿ, ಹೊಸ ರುಚಿಗೆ ಪಾತ್ರರಾಗಿ.
ರುಚಿಕರವಾದ ಬಾಳೆಹಣ್ಣಿನ ಬಜ್ಜಿ ಮಾಡುವ ವಿಧಾನ
ಬೇಕಾಗುವ ಸಾಮಗ್ರಿಗಳು
•ಮೈದಾ ಹಿಟ್ಟು- ಅರ್ಧ ಬಟ್ಟಲು
•ಅಕ್ಕಿ ಹಿಟ್ಟು - 2 ಚಮಚ
•ಸಕ್ಕರೆ- 2 ಚಮಚ
•ಅರಿಶಿನದ ಪುಡಿ- ಅರ್ಧ ಚಮಚ
•ಏಲಕ್ಕಿ ಪುಡಿ- ಕಾಲು ಚಮಚ
•ಚುಕ್ಕಿ ಬಾಳೆಹಣ್ಣು- 3
•ಎಣ್ಣೆ- ಕರಿಯಲು ಆಗತ್ಯವಿರುವಷ್ಟು
ಮಾಡುವ ವಿಧಾನ
•ಮೈದಾ ಹಿಟ್ಟು, ಅಕ್ಕಿ ಹಿಟ್ಟು , ಸಕ್ಕರೆ, ಅರಿಶಿನದ ಪುಡಿ, ಏಲಕ್ಕಿ ಪುಡಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ, ಸ್ವಲ್ಪ ನೀರು ಹಾಕಿ ಬಜ್ಜಿಯ ಹಿಟ್ಟಿನಂತೆ ಕಲಸಿಕೊಳ್ಳಬೇಕು.
•ನಂತರ ಚುಕ್ಕಿ ಬಾಳೆಹಣ್ಣಿನ ಸಿಪ್ಪೆ ತೆಗೆದು, ಉದ್ದಕ್ಕೆ ಸಣ್ಣಗೆ ಕತ್ತರಿಸಿಕೊಳ್ಳಬೇಕು. ನಂತರ ಒಲೆಯ ಮೇಲೆ ಎಣ್ಣೆ ಇಟ್ಟು. ಕಾದ ನಂತರ ಹಿಟ್ಟಿಗೆ ಕತ್ತರಿಸಿದ ಬಾಳೆಹಣ್ಣನ್ನು ಅದ್ದಿ ಎಣ್ಣೆಗೆ ಹಾಕಿ ಚಿನ್ನದ ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಬಾಳೆಹಣ್ಣಿನ ಬಜ್ಜಿ ಸವಿಯಲು ಸಿದ್ಧ.