ಬೆಂಗಳೂರು : ಬಾಳೆಹಣ‍್ಣನ್ನು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಈ ಬಾಳೆಹಣ್ಣನ್ನು ಬಳಸಿ ಮುಖದ ಚರ್ಮದ ಹೊಳಪನ್ನು ಕೂಡ ಹೆಚ್ಚಿಸಬಹುದು. ಹಾಗಾಗಿ ಮನೆಯಲ್ಲಿಯೇ ಬಾಳೆಹಣ್ಣಿನ ಮಸಾಜ್ ಕ್ರೀಂ ತಯಾರಿಸಿ ಬಳಸಿ.
ಬಾಳೆಹಣ್ಣು ½ , ಜೇನುತುಪ್ಪ 1 ಚಮಚ, ನಿಂಬೆರಸ 2 ಚಮಚ, ಅರಶಿನ ಪುಡಿ ¼ ಚಮಚ, ಮೊಸರು 1 ½ ಚಮಚ ಈ ಎಲ್ಲಾ ವಸ್ತುಗಳನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಿ. ಒಣಗಿದ ಬಳಿಕ ತಣ್ಣೀರಿನಿಂದ ವಾಶ್ ಮಾಡಿ.
ಇದು ಚರ್ಮದಲ್ಲಿ ರಕ್ತಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ಚರ್ಮದಲ್ಲಿರುವ ಕೊಳೆ ಹೊರಹೋಗಿ ಚರ್ಮದ ಹೊಳಪು ಹೆಚ್ಚಾಗುತ್ತದೆ.