Select Your Language

Notifications

webdunia
webdunia
webdunia
webdunia

ಅಧಿಕಾರಕ್ಕೆ ತರುವ ವಿಶ್ವಾಸದೊಂದಿಗೆ ಹೋಗುತ್ತಿದ್ದೇನೆ : ಯಡಿಯೂರಪ್ಪ

ಯಡಿಯೂರಪ್ಪ
ಬೆಂಗಳೂರು : ಪಕ್ಷದ ಏಳಿಗೆಗಾಗಿ, ಪಕ್ಷವನ್ನು ಬೆಳೆಸಲು ಕೊನೆ ಉಸಿರು ಇರುವವರೆಗೂ ಹೋರಾಡುತ್ತೇನೆ. ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇನೆ.

ಆ ವಿಶ್ವಾಸದೊಂದಿಗೆ ಇಲ್ಲಿಂದ ಹೋಗುತ್ತಿದ್ದೇನೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿಧಾನಸಭೆಯಲ್ಲಿ ವಿದಾಯ ಭಾಷಣ ಮಾಡಿದ್ದಾರೆ.

ವಿಧಾನ ಸಭೆಯಲ್ಲಿ ಮಾತನಾಡಿದ ಅವರು, ಈ ಸದನದವನ್ನು ಅಧ್ಯಕ್ಷರಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಯಶಸ್ವಿಯಾಗಿ ನಡೆಸಿದ್ದಾರೆ. ನೀವು ಮುಂದಿನ ಬಾರಿ ಮಂತ್ರಿಯಾಗಿ ಇಲ್ಲಿ ಕೂರಬೇಕು. ಇಲ್ಲಿ ಮಹಿಳೆಯರು ಹೆಚ್ಚು ಆಯ್ಕೆ ಆಗಬೇಕು ಎಂದು ನುಡಿದರು.

ಶಿಕಾರಿಪುರದ ಜನರಿಗೆ ಧನ್ಯವಾದ ತಿಳಿಸಿದ ಯಡಿಯೂರಪ್ಪ, ಅವರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ. ಫೆಬ್ರವರಿ 27ಕ್ಕೆ ನನಗೆ 80 ವರ್ಷ ತುಂಬುತ್ತದೆ. ಪ್ರಧಾನಿ ನರೇಂದ್ರ ಮೋದಿ ನನ್ನ ಹುಟ್ಟು ಹಬ್ಬಕ್ಕೆ ಬರಲಿದ್ದಾರೆ. ಅಂದೇ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆಯಾಗಲಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮ ಆಸ್ತಿ : CBI ನಿಂದ ಡಿಕೆಶಿಗೆ ಇನ್ನೂ ಒಂದು ವಾರ ರಿಲೀಫ್