Publish Date: Wed, 22 Feb 2023 (19:20 IST)
Updated Date: Wed, 22 Feb 2023 (19:35 IST)
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸದನದಲ್ಲಿ ಬುಧವಾರ ವಿದಾಯ ಭಾಷಣ ಮಾಡಿ ಭಾವುಕರಾದರು.ವಿಧಾನಸಭೆಯಲ್ಲಿ ಮಾತನಾಡಿದ 79ರ ಹರೆಯದ ಹಿರಿಯ ನಾಯಕ ಯಡಿಯೂರಪ್ಪ ಅವರು, ಇದೊಂದು ಅಪರೂಪದ ಕ್ಷಣ, ನಾನು ಈಗಾಗಲೇ ಹೇಳಿದಂತೆ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ.ಇದು ನನ್ನ ವಿದಾಯ ಭಾಷಣ. ನನಗೆ ಮಾತನಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು ಎಂದರು.ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ನೀಡಿದ ಸ್ಥಾನಮಾನ ನನ್ನ ಜೀವಮಾನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಅವರು ಹೇಳಿದರು.ಕೆಲ ವಿಪಕ್ಷ ಸದಸ್ಯರು ನೀವು ಮತ್ತೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಒತ್ತಾಯಿಸಿದರು.
geetha
Publish Date: Wed, 22 Feb 2023 (19:20 IST)
Updated Date: Wed, 22 Feb 2023 (19:35 IST)