ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸಲು ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ಪಡೆದ ತೇಜಸ್ವಿ ಸೂರ್ಯ ಅವರ ಮೇಲೆ ಯುವತಿಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ.
ಡಾ. ಸೋಮ್ ದತ್ತಾ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸರಣಿ ಟ್ವೀಟ್ ಮಾಡಿ, 5 ವರ್ಷ ನಾನು ತೇಜಸ್ವಿ ಸೂರ್ಯ ಕೈಯಲ್ಲಿ ನರಳಿದ್ದೇನೆ. ನನ್ನ ಪ್ರೀತಿ ಕುರುಡಾಗಿತ್ತು. ನನ್ನನ್ನು ನಂಬಿ ನಾನು ಮೊದಲನೇಯ ಬಲಿಪಶು ಅಲ್ಲ, ಕೊನೆಯವಳೂ ಅಲ್ಲ. ಪ್ರತಿಯೊಬ್ಬ ಹಿಂದೂವು ನಿಜವಾದ ಅರ್ಥದಲ್ಲಿ ಧಾರ್ಮಿಕನಾಗಿರಲ್ಲ. ದೊಡ್ಡದಾಗಿ ಭಾಷಣ ಮಾಡೋರೆಲ್ಲ ದೊಡ್ಡ ವ್ಯಕ್ತಿ ಆಗಿರಲಿಲ್ಲ ಸತ್ಯ ಗೊತ್ತಿಲ್ಲದೆ ತೇಜಸ್ವಿ ಸೂರ್ಯಗೆ ಪುಕ್ಕಟೆ ಪ್ರಚಾರ ಕೊಡಬೇಡಿ. ಇಂಥ ವ್ಯಕ್ತಿಗೆ ಟಿಕೆಟ್ ಕೊಡುವ ಮೊದಲು ಬಿಜೆಪಿ ಹಿನ್ನೆಲೆಯನ್ನ ಪರಿಶೀಲಿಸಬೇಕಿತ್ತಲ್ಲ ಎಂದು ತೇಜಸ್ವಿ ಸೂರ್ಯ ವಿರುದ್ಧ ಆರೋಪ ಮಾಡಿದ್ದಾಳೆ.
ಆದರೆ ಆಕೆಯ ಟ್ವೀಟ್ ವೈರಲ್ ಆಗುತ್ತಿದ್ದಂತೆಯೇ ನನ್ನ ಹಾಗೂ ತೇಜಸ್ವಿ ವಿಚಾರವನ್ನು ಇಲ್ಲಿಗೆ ನಿಲ್ಲಿಸಿ ಎಂದು ನೆಟ್ಟಿಗರಲ್ಲಿ ಮನವಿ ಮಾಡಿ ಎಲ್ಲಾ ಟ್ವೀಟ್ ಗಳನ್ನು ಡಿಲೀಟ್ ಮಾಡಿದ್ದಾಳೆ. ಇದೂವರೆಗೆ ಪ್ರಶ್ನೆ ಮಾಡದ ಈಕೆ ತೇಜಸ್ವಿ ಅವರಿಗೆ ಟಿಕೆಟ್ ಸಿಕ್ಕಿದ ಕೂಡಲೇ ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡಿದ್ದಾಳೆ. ತೇಜಸ್ವಿ ಸೂರ್ಯ ಅವರ ತೇಜೋವಧೆ ಮಾಡಲು ಈ ಮಹಿಳೆ ಮುಂದಾಗಿದ್ದಾರೆ ಎಂದು ತೇಜಸ್ವಿ ಅಭಿಮಾನಿಗಳು ಹಾಗೂ ಬಿಜೆಪಿಗರು ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.