ಜಕಾರ್ತ: ಸ್ತ್ರೀಯ ಸುಂದರ ಶಿಲ್ಪವನ್ನು ಕಲೆ ಎಂಬ ದೃಷ್ಟಿಯಿಂದ ವೀಕ್ಷಿಸಿ ಜನರು ಸಂತೋಷಪಡುತ್ತಾರೆ. ಆದರೆ ಇಂಡೋನೇಷ್ಯಾ ಸರ್ಕಾರ ಇಂತಹ ಸುಂದರ ಶಿಲ್ಪವೊಂದರ ಎದೆಭಾಗವನ್ನು ಮುಚ್ಚಿ ವಿವಾದಕ್ಕೀಡಾಗಿದೆ.
ಇಂಡೋನೇಷ್ಯಾದ ಥೀಮ್ ಪಾರ್ಕ್ ಒಂದರಲ್ಲಿ 15 ವರ್ಷಗಳಿಂದಲೂ ಮಹಿಳೆಯ ಸುಂದರ ಶಿಲ್ಪವೊಂದಿದೆ. ಈ ಶಿಲ್ಪ ಇದುವರೆಗೆ ಬೆತ್ತಲಾಗಿಯೇ ಇತ್ತು. ಆದರೆ ಈಗ ಸರ್ಕಾರ ಇದ್ದಕ್ಕಿದ್ದ ಹಾಗೆ ಶಿಲ್ಪದ ಸ್ತನದ ಭಾಗಕ್ಕೆ ಚಿನ್ನದ ಬಣ್ಣದ ಬಟ್ಟೆ ಮುಚ್ಚಿ ಟೀಕೆಗೆ ಗುರಿಯಾಗಿದೆ. ಇದು ಕುಟುಂಬ ಸಮೇತವಾಗಿ ಬರುವ ಜನರಿಗೆ ಮುಜುಗರವುಂಟುಮಾಡಬಹುದು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸಮಜಾಯಿಷಿ ನೀಡಿದೆ.
ಆದರೆ ಇಷ್ಟು ದಿನ ಇಲ್ಲದ ಮುಜುಗರ ಈಗ ಹೇಗೆ ಸೃಷ್ಟಿಯಾಗುತ್ತದೆ? ಇದುವರೆಗೆ ಈ ಶಿಲ್ಪವನ್ನು ಕಲೆಯ ದೃಷ್ಟಿಯಿಂದಲೇ ನೋಡುತ್ತಿದ್ದೆವು ಹೊರತು, ಅಶ್ಲೀಲ ದೃಷ್ಟಿಯಿಂದ ಅಲ್ಲ ಎನ್ನುವುದು ಜನರ ವಾದವಾಗಿದೆ. ಅಂತೂ ಎದೆ ಭಾಗಕ್ಕೆ ಬಟ್ಟೆ ಮುಚ್ಚಿ ಸರ್ಕಾರ ವಿವಾದಕ್ಕೆ ಗುರಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ