Publish Date: Tue, 16 Mar 2021 (09:04 IST)
Updated Date: Tue, 16 Mar 2021 (09:07 IST)
ಹಾವೇರಿ : ತನ್ನ ಸಹೋದರಿ ನೆರೆಮನೆಯಾತನ ಜತೆ ಓಡಿ ಹೋಗಿದ್ದಕ್ಕೆ 17 ವರ್ಷದ ಹುಡುಗಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿಯ ಬೈದಗಿಯಲ್ಲಿ ನಡೆದಿದೆ.
ಸಂತ್ರಸ್ತೆಯ ಸಹೋದರಿ ನೆರೆಮನೆಯಾತನನ್ನು ಪ್ರೀತಿಸುತ್ತಿದ್ದಳು, ಬಳಿಕ ಆತನ ಜೊತೆ ಓಡಿಹೋಗಿದ್ದಾಳೆ. ಇದರಿಂದ ತನ್ನ ಮದುವೆಗೆ ಕಂಟಕವಾಗಲಿದೆ ಎಂಬ ಖಿನ್ನತೆಗೆ ಒಳಗಾದ ಸಂತ್ರಸ್ತೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಬ್ಬರು ಮಕ್ಕಳನ್ನು ಕಳೆದುಕೊಂಡ ತಾಯಿ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.