Publish Date: Tue, 16 Mar 2021 (08:03 IST)
Updated Date: Tue, 16 Mar 2021 (08:04 IST)
ಕಾನ್ಪುರ : ಪತ್ನಿಯ ಮೇಲಿನ ಕೋಪಕ್ಕೆ ಪತಿ ತನ್ನ ನಾಲಿಗೆಯನನು ಕತ್ತರಿಸಿಕೊಂಡ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಯುವಕ ಸಣ‍್ಣ ಪುಟ್ಟ ವಿಚಾರಕ್ಕೆ ಪತ್ನಿಯ ಜೊತೆ ಜಗಳವಾಡುತ್ತಿದ್ದ. ಇದರಿಂದ ಬೇಸರಗೊಂಡಿದ್ದ ಪತ್ನಿ ತನ್ನ ತವರು ಮನೆಗೆ ಹೋಗಿದ್ದಾಳೆ. ಬಳಿಕ ಯುವಕ ಪತ್ನಿಗೆ ವಾಪಾಸು ಬರುವಂತೆ ಕೇಳಿಕೊಂಡಿದ್ದಾನೆ .
ಆದರೆ ಆಕೆ ಇದಕ್ಕೆ ಒಪ್ಪದಿದ್ದಾಗ ಆತ ಕೋಪದಿಂದ ತನ್ನ ನಾಲಿಗೆ ಕತ್ತರಿಸಿಕೊಂಡಿದ್ದಾನೆ. ಅವನ ಕೂಗಾಟ ಕೇಳಿ ನೆರೆಮನೆಯವರು ಮನೆಗೆ ಬಂದು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.