ಕೊಯಮತ್ತೂರು : ತಮಿಳುನಾಡಿನ ಸೇಲಂನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನ ಇಡ್ಲಿಗಳನ್ನು ಸಾರ್ವಜನಿಕರಿಗೆ ನೀಡಲು ಮುಂದಾಗಿದೆ.
ಇದಕ್ಕೆ ‘ಮೋದಿ ಇಡ್ಲಿಸ್’ ಎಂದು ಹೆಸರಿಡಲಾಗಿದ್ದು, ಬಿಜೆಪಿ ಪ್ರಚಾರ ಕೋಶ ರಾಜ್ಯ ಉಪಾಧ್ಯಕ್ಷ ಮಹೇಶ್ ಅವರು ರೂಪಿಸಿದ ಉಪಕ್ರಮದ ಪ್ರಕಾರ 4 ಇಡ್ಲಿಗಳನ್ನು 10ರೂ. ನೀಡಲಾಗುವುದು. ಕಡಿಮೆ ಬೆಲೆಗೆ ಇಡ್ಲಿಗಳನ್ನು ಈ ವರ್ಷ ತಮಿಳುನಾಡಿನ ವಿವಿಧ ಸ್ಥಳಗಳಲ್ಲಿ ನೀಡಲಾಗುತ್ತಿದೆ.
ಈ ಬಗ್ಗೆ ನಗರದ ವಿವಿಧ ಕಡೆ ಪೋಸ್ಟರ್ ಗಳನ್ನು ಹಾಕಲಾಗಿದೆ. ಅದರಲ್ಲಿ ಪ್ರಧಾನಿ ಮೋದಿ ಹಾಗೂ ಮಹೇಶ್ ಅವರ ಚಿತ್ರ ಹಾಕಿ 4 ಇಡ್ಲಿಗೆ 10ರೂ. ಎಂದು ಬರೆಯಲಾಗಿದೆ. ಅಲ್ಲದೇ ಆರಂಭದಲ್ಲಿ 22 ಅಂಗಡಿಗಳನ್ನು ತೆರೆಯುವ ಯೋಜನೆ ಇದ್ದು, ಮುಂದಿನ ದಿನಗಳಲ್ಲಿ ಅಂಗಡಿಯ ಸಂಖ್ಯೆ ಹೆಚ್ಚಿಸಲಾಗುವುದು ಎನ್ನಲಾಗಿದೆ.