ವಿಚಾರವಾದಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನ ಅವರ ಮನೆಯಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ನಕ್ಸಲರನ್ನ ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೌರಿ ಲಂಕೇಶ್, ಬಲಪಂಥೀಐ ಧೋರಣೆಗಳನ್ನ ತಮ್ಮ ಬರವಣಿಗೆ ಮೂಲಕ ವಿರೋಧಿಸುತ್ತಲೇ ಬಂದಿದ್ದರು. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಗೌರಿ ಲಂಕೇಶ್ ಅವರಿಗೆ ಈ ಹಿಂದೆ ಹಲವು ಬಾರಿ ಜೀವ ಬೆದರಿಕೆ ಬಂದಿದ್ದ ಬಗ್ಗೆ ವರದಿಯಾಗಿದೆ.
ಸ್ನೇಹಿತೆ ಬಿ.ಟಿ. ನಾಯಕ್ ಜೊತೆ ತಮಗೆ ಜೀವ ಬೆದರಿಕೆ ಇರುವ ಬಗ್ಗೆ ಗೌರಿ ಲಂಕೇಶ್ ಒಂದು ತಿಂಗಳ ಹಿಂದೆಯೇ ಹೇಳಿಕೊಂಡಿದ್ದರಂತೆ. ಬಿ.ಟಿ. ಲಲಿತಾನಾಯಕ್ ಅವರಿಗೆ ಬೆದರಿಕೆ ಪತ್ರ ಬಂದಿದ್ದರ ಬಗ್ಗೆ ದೂರು ನೀಡಿದ್ದನ್ನ ಗೌರಿ ಮುಂದೆ ಪ್ರಸ್ತಾಪಿಸಿದ್ದರಂತೆ. ಪೊಲೀಸರಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ತೋಡಿಕೊಂಡಿದ್ದರಂತೆ. ಈ ಸಂದರ್ಭ ಗೌರಿ ಲಂಕೇಶ್ ಸಹ ತಮಗೆ ಬಂದಿದ್ದ ಬೆದರಿಕೆ ಕರೆ ಬಗ್ಗೆ ಹೇಳಿದ್ದರು. ಅನ್ಯಾಯದ ವಿರುದ್ಧ ಹೋರಾಡುವ ನಮ್ಮಂಥವರಿಗೆ ಬೆದರಿಕೆಗಳು ಸಾಮಾನ್ಯ. ಅದಕ್ಕೆ ತಲೆಕೆಡಿಸಿಕೊಂಡರೆ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದಿದ್ದರಂತೆ.
ಕಳೆದ ಕೆಲ ದಿನಗಳಿಂದ ದುಷ್ಕರ್ಮಿಗಳು ಗೌರಿ ಲಂಕೇಶ್ ಅವರನ್ನ ಹಿಂಬಾಲಿಸಿದ್ದರು ಎಂಬ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ. ಸೆಪ್ಟೆಂಬರ್ 2ರಂದು ಗೃಹ ಸಚಿವ ರಾಮಲಿಂಗಗಾರೆಡ್ಡಿಗೆ ಕರೆ ಮಾಡಿ ಭೇಟಿಗೆ ಅವಕಾಶ ಕೇಳಿದ್ದರಂತೆ. ಸೋಮವಾರ ಭೇಟಿ ಮಾಡುವಂತೆ ಹೇಳಿದ್ದರಂತೆ. ಈ ಎಲ್ಲ ಸಂದರ್ಭ ಗಮನಿಸಿದರೆ ಗೌರಿ ಲಂಕೇಶ್ ಅವರನ್ನ ಹಲವು ದಿನಗಳನ್ನ ಫಾಲೋ ಮಾಡಿ ವ್ಯವಸ್ಥಿತವಾಗಿ ಕೊಂದಿರುವುದು ಸ್ಪಷ್ಟವಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ