ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಬಗ್ಗೆ ಸ್ಯಾಂಡಲ್ ವುಡ್ ತಾರೆಯರು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ನಟ ಜಗ್ಗೇಶ್, ಉಪೇಂದ್ರ ಮತ್ತು ನಟಿ ರಮ್ಯಾ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಗೌರಿ ಲಂಕೇಶ್ ಮೇಲಿನ ದಾಳಿ ಸುದ್ದಿ ಕೇಳಿ ಆಘಾತವಾಯಿತು. ಇದೊಂದು ಹೀನ ಕೃತ್ಯ. ಈ ಕೃತ್ಯವನ್ನು ಖಂಡಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಟ ಉಪೇಂದ್ರ ಹೇಳಿದ್ದಾರೆ.
ಇನ್ನೊಂದೆಡೆ ಜಗ್ಗೇಶ್ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗೌರಿ ಲಂಕೇಶ್ ಹತ್ಯೆ ಹೇಯ ಕೃತ್ಯ. ಬೆಂಗಳೂರಿಗೆ ಚಾಕು ಚೂಟಿ ಸಂಸ್ಕೃತಿ ಅಪಾಯಕಾರಿ. ಸರ್ಕಾರ, ಆರಕ್ಷಕರು ಇದನ್ನು ಈಗಲೇ ಮಟ್ಟ ಹಾಕದಿದ್ದರೆ ಇದು ಕಾಡ್ಗಿಚ್ಚಾಗಬಹುದು ಎಂದು ಎಚ್ಚರಿಸಿದ್ದಾರೆ.
ಇನ್ನು ನಟಿ ರಮ್ಯಾ ಕೂಡಾ ಪ್ರತಿಕ್ರಿಯಿಸಿದ್ದು, ನಿಜಕ್ಕೂ ಶಾಕಿಂಗ್ ನ್ಯೂಸ್. ನಿಮ್ಮನ್ನು ನಾವು ಖಂಡಿತವಾಗಿ ಮಿಸ್ ಮಾಡಿಕೊಳ್ತೇವೆ ಎಂದು ಬರೆದುಕೊಂಡಿದ್ದಾರೆ.