Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೊಂಕಣ ಖಾರ್ವಿ ಸಮಾಜದ ಗಣೇಶೋತ್ಸವ ಸಂಭ್ರಮ

ಕೊಂಕಣ ಖಾರ್ವಿ ಸಮಾಜದ ಗಣೇಶೋತ್ಸವ ಸಂಭ್ರಮ
ಕಾರವಾರ , ಬುಧವಾರ, 19 ಸೆಪ್ಟಂಬರ್ 2018 (20:44 IST)
ಕೊಂಕಣ ಖಾರ್ವಿ ಸಮಾಜದ ಗಣೇಶೋತ್ಸವ ಸಮಿತಿಯ 25 ನೇ ವರ್ಷದ ಹಿನ್ನೆಲೆಯಲ್ಲಿ ರಜತ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ ಗ್ರಾಮದ ಕೊಂಕಣ ಖಾರ್ವಿ ಸಮಾಜದ ಗಣೇಶೋತ್ಸವ ಸಮಿತಿಯ 25 ನೇ ವರ್ಷದ ಹಿನ್ನೆಲೆಯಲ್ಲಿ ರಜತ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಮೀನುಗಾರಿಕೆ ಮೂಲ ಉದ್ಯೋಗವನ್ನಾಗಿ ಮಾಡಿಕೊಂಡಿರುವ ಕೊಂಕಣಿ ಖಾರ್ವಿ ಸಮಾಜದವರು ಕಳೆದ 25 ವರ್ಷಗಳಿಂದ ಅತ್ಯಂತ ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸುತ್ತಾ ಬಂದಿದ್ದಾರೆ. ಈ ಭಾಗದ ಸುಮಾರು ಇನ್ನೂರಕ್ಕೂ ಹೆಚ್ಚು ಕುಟುಂಬದ ಸದಸ್ಯರು ಈ ಗಣಪತಿಯನ್ನುಪೂಜಿಸುತ್ತಾರೆ.

ಈ ವರ್ಷ 25ನೇ ವರ್ಷದ ರಜತ ಸಂಭ್ರಮದ ಪ್ರಯುಕ್ತ ಐದು ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳು ನಡೆದವು. ಧಾರ್ಮಿಕ ಕಾರ್ಯಕ್ರಮಗಳು, ಸನ್ಮಾನ, ಪ್ರತಿಭಾ ಪುರಸ್ಕಾರ, ಅನ್ನದಾನ ಕಾರ್ಯಕ್ರಮಗಳು ನಡೆದವು.




Share this Story:

Follow Webdunia kannada

ಮುಂದಿನ ಸುದ್ದಿ

ಸೌಲಭ್ಯಕ್ಕಾಗಿ ಆಗ್ರಹಿಸಿ ಬೀದಿಗಿಳಿದು ಪ್ರತಿಭಟಿಸಿದ ಸಂತ್ರಸ್ಥರು