Publish Date: Sat, 20 Oct 2018 (15:50 IST)
Updated Date: Sat, 20 Oct 2018 (15:51 IST)
ರಾಜ್ಯದ ಪ್ರಸಿದ್ಧ ಮಠಗಳಲ್ಲಿ ಒಂದಾಗಿರುವ ಗದಗ ತೋಂಟದಾರ್ಯ ಮಠದ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ.
ಹೃದಯಾಘಾತದಿಂದ ಸ್ವಾಮೀಜಿ ಇಹಲೋಕ ತ್ಯಜಿಸಿದ್ದಾರೆ.
ಅಪಾರ ಭಕ್ತರನ್ನು ಹೊಂದಿರುವ ಸ್ವಾಮೀಜಿ, ಹೃದಯ ಆಘಾತದಿಂದ ನಿಧನ ಹೊಂದಿರುವುದು ಭಕ್ತರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.
ಅಪಾರ ಭಕ್ತರನ್ನು ಅಗಲಿದ ತೋಂಟದಾರ್ಯ ಶ್ರೀಗಳು ಪ್ರಸಿದ್ಧ ಸ್ವಾಮೀಜಿಗಳಾಗಿದ್ದರು. ಧಾರ್ಮಿಕ ಕ್ಷೇತ್ರದಲ್ಲಿ ಉದಾತ್ತ ಹೆಸರನ್ನು ಮಾಡಿದ್ದರು.
ಶ್ರೀಗಳ ಅಗಲಿಕೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಅಪಾರ ಭಕ್ತರು ತಂಡೋಪ ತಂಡವಾಗಿ ಗದಗನ ತೋಂಟದಾರ್ಯ ಮಠದ ಆವರಣದಲ್ಲಿ ಜಮೆ ಆಗುತ್ತಿದ್ದಾರೆ.