Publish Date: Mon, 08 Oct 2018 (07:56 IST)
Updated Date: Mon, 08 Oct 2018 (07:58 IST)
ಹಾವೇರಿ : ಬಿ.ಸಿ ಪಾಟೀಲ್ ಅವರು ನನಗೆ ಸಚಿವ ಸ್ಥಾನ ಕೊಡಲೇಬೇಕು ಎಂದು ಸರ್ಕಾರ ಹಾಗೂ ಕಾಂಗ್ರೆಸ್ ಹೈಕಮಾಂಡ್ ಗೆ ಖಡಕ್ ಆಗಿ ವಾರ್ನ್ ಮಾಡಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಗದಗ, ಹಾವೇರಿ, ಧಾರವಾಡದ ಏಕೈಕ ಲಿಂಗಾಯಿತ ಶಾಸಕ ನಾನು ಆಗಿರುವೆ, ನನಗೆ ಕೊಡದೇ ಇನ್ಯಾರಿಗೆ ಕೊಡಬೇಕು ಅಂತ ಪ್ರಶ್ನೆ ಮಾಡಿದ್ದಾರೆ.
ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಸಚಿವ ಸಂಪುಟ ವಿಸ್ತರಣೆಯಾಗದೇ ಇರುವ ಲಕ್ಷಣ ಕಾಣಿಸುತ್ತಿದೆ ಹಿರೇಕೆರೂರು ವಿಧಾನಸಭಾ ಕ್ಷೇತ್ರದಿಂದ 36 ವರ್ಷಗಳಿಂದ ಯಾರಿಗೂ ಕೂಡ ಸಚಿವ ಸ್ಥಾನವನ್ನು ನೀಡಿಲ್ಲ, ಹೀಗಾಗಿ ನನಗೆ ಸಚಿವ ಸ್ಥಾನ ಬೇಕೆ ಬೇಕು ಅಂತ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.