ಕೆಪಿಸಿಸಿ ಕಚೇರಿಯಲ್ಲಿ ಡಿ ಕೆ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದ ಡಿ ಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಈ ದಿನ ದೊಡ್ಡ ಆಘಾತ ಉಂಟು ಮಾಡಿದ ದಿನ.ಭಗವಂತ ಯಾಕೆ ಇಷ್ಟು ಕ್ರೂರಿ ಅಂತ ಗೊತ್ತಿಲ್ಲ.ದೃವನಾರಾಯಣ ಅವರು ಅಜಾತಶತ್ರು.ಪಕ್ಷದ ನಿಷ್ಠೆ, ಪ್ರಾಮಾಣಿಕ ನಿಷ್ಠೆ ಹೊಂದಿದಂದ ಆತ್ಮೀಯ.ಕೋವಿಡ್ ಸಂದರ್ಭದಲ್ಲಿ ಅರೋಗ್ಯಸ್ತಾ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು.
ಸಂಘಟನೆಯ ರಾಜಕಾರಣಕ್ಕೆ ಶಾಶ್ವತ ಕಾರ್ಯಗಳನ್ನ ರೂಪಿಸಿದರು.ಮೂರು ಗಂಟೆಗೆ ಮಲಗಿದ್ದೆ 6-6:30 ಕ್ಕೆ ನಮ್ ಹೆಂಡತಿಗೆ ಕರೆ ಮಾಡಿ ಡಾಕ್ಟರ್ ಹೇಳಿದ್ರು ಅಂತೆ ರಕ್ತದ ವಾಂತಿ ಮಾಡ್ಕೋತ ಇದಾರೆ ಅಂತಾ ಹೇಳಿದ್ರು.ಆಸ್ಪತ್ರೆಗೆ ದಾಖಲಾಗಿ 5 ನಿಮಿಷಕ್ಕೆ ಅವರು ಇನ್ನು ಇಲ್ಲ ಅಂತ ಗೊತ್ತಾಯಿತು.ಎಲ್ಲಾ ಸಮಸ್ಯೆಗಳನ್ನು ಉತ್ತಮವಾಗಿ ನಿಭಾಯಿಸಿದ್ರು.ನಂಜನಗೂಡು ಪ್ರಜಾಧ್ವನಿ ಯಾತ್ರೆ ನೆರವೇರಿಸಿದ್ರು.ಇತಿಹಾಸದಲ್ಲೇ ನೆನೆಪಿಟ್ಟುಕೊಳ್ಳಬೇಕಾದ ಯಾತ್ರೆ ಮಾಡಿದ್ದಾರೆ ಎಂದು ಡಿಕೆ ಶಿವಕುಮಾರ್ ಬಾವುಕರಾದರು.
ಮಲ್ಲಿಕಾರ್ಜುನ ಖರ್ಗೆಗೆ ದೃವನಾರಾಯಣ ಅವರು ತುಂಬಾ ಆತ್ಮೀಯರು.ನಂಜನಗೂಡು ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರಿಗೆ ಸಲಹೆ ಕೊಟ್ಟಿದ್ರು.ಇಂದು ನಮ್ಮ ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆ ಅವರು ಅಂತಿಮ ದರ್ಶನಕ್ಕೆ ಬರ್ತಾ ಇದಾರೆ.ಮೂರು ಗಂಟೆಗೆ ವಿಶೇಷ ವಿಮಾನದಲ್ಲಿ ಬರ್ತಾ ಇದಾರೆ.ನಾಳೆ ಮದ್ಯಾಹ್ನ ದೃವನಾರಾಯಣ ಅಂತಿಮ ಸಂಸ್ಕಾರ ನೆರವೇರುತ್ತೆ.ನಾವು ಸಹ ಎಲ್ಲಾ ಕಾಂಗ್ರೆಸ್ ಕುಟುಂಬ ಅವರ ದರ್ಶನಕ್ಕೆ ಹೋಗ್ತಿವಿ.ನಮಗೆಲ್ಲ ಮಾರ್ಗ ದರ್ಶನ ನೀಡಿದವರಯ ಅವರು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಡಿಕೆಶಿ ಸಂತಾಪ ಸೂಚಿಸಿದ್ರು.