Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇನ್ಮುಂದೆ ಸಿಗರೇಟ್ ಹೊಗೆ ರೋಡಲ್ಲಿ ಬಿಟ್ರೆ ಹುಷಾರ್, ಬೆಂಗ್ಳೂರಿನ ಹೊಟೇಲ್‌, ಪಬ್, ಬಾರ್‌ಗಳಿಗೆ ಹೊಸ ರೂಲ್ಸ್‌

ಇನ್ಮುಂದೆ ಸಿಗರೇಟ್ ಹೊಗೆ ರೋಡಲ್ಲಿ ಬಿಟ್ರೆ ಹುಷಾರ್, ಬೆಂಗ್ಳೂರಿನ ಹೊಟೇಲ್‌, ಪಬ್, ಬಾರ್‌ಗಳಿಗೆ ಹೊಸ ರೂಲ್ಸ್‌

Sampriya

ಬೆಂಗಳೂರು , ಶನಿವಾರ, 27 ಜುಲೈ 2024 (19:18 IST)
Photo Courtesy X
ಬೆಂಗಳೂರು:  ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ  ಹೋಟೆಲ್‌, ಪಬ್‌, ಬಾರ್‌, ರೆಸ್ಟೋರೆಂಟ್‌ ಹಾಗೂ ಕಾಫಿ ಬಾರ್‌ಗಳಿಗೆ ಹೊಸ ನಿಯಮಗಳನ್ನು ಜಾರಿ ಮಾಡಿದೆ.

ಹೊಟೇಲ್, ಬಾರ್ ಹಾಗೂ ರೆಸ್ಟೋರೆಂಟ್‌ಗಳಿಗೆ ಬರುವ ಧೂಮಪಾನಿಗಳು ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿರುವ ದೂರು ಬಂದ ಹಿನ್ನೆಲೆ ಇದೀಗ ಬಿಬಿಎಂಪಿ ಹೊಸ ನಿಯಮ ಜಾರಿ ಮಾಡಿದೆ. ನಿಯಮ ಉಲ್ಲಂಘನೆ ಮಾಡಿದ್ದು ತಿಳಿದುಬಂದಲ್ಲಿ ಕಟ್ಟು ನಿಟ್ಟಿನ ಕ್ರಮದ ಎಚ್ಚರಿಕೆ ನೀಡಿದೆ.

ಬಿಬಿಎಂಪಿ ಹೊಸ ನಿಯಮದಲ್ಲೇನಿದೆ:

    30 ಕೊಠಡಿಗಳಿಗಿಂತ ಮೇಲ್ಪಟ್ಟ ಹೋಟೆಲ್ , ಬಾರ್ & ರೆಸ್ಟೋರೆಂಟ್, ಪಬ್ ಇದ್ರೆ 30 ಕುರ್ಚಿ ಇರುವ ಧೂಮಪಾನ ಪ್ರದೇಶ ನಿಗದಿ ಮಾಡಬೇಕು.


    ಧೂಮಪಾನ ವಲಯ ನಿರ್ಮಾಣ ಮಾಡಿ ಪೋಟೋ ಸಮೇತ ಸ್ಮೋಕಿಂಗ್ ಝೂನ್‌ಗೆ ಪರವಾನಗಿಗೆ ಅರ್ಜಿ ಹಾಕಬೇಕು.
    ಅಧಿಕಾರಿಗಳು ಸ್ಥಳಕ್ಕೆ ಭೇಟಿ ನಿಯಮಾನುಸಾರ ಸ್ಮೋಕಿಂಗ್ ಝೂನ್ ಇದೆಯೇ ಅಂತ ರಿಪೋರ್ಟ್ ಕೊಟ್ಟರೆ, ಆಮೇಲೆ ಎನ್‌ಒಸಿ ವಿತರಣೆಗೆ ಸೂಚನೆ ನೀಡಲಾಗುತ್ತದೆ.
    ಸ್ಮೋಕಿಂಗ್ ಏರಿಯಾ ಕೊಠಡಿಗೆ ಎಂಟ್ರಿ ಆದಾಗ ಸ್ವಯಂಚಾಲಿತವಾಗಿ ಬಾಗಿಲು ಬಂದ್‌ ಆಗುವ ರೀತಿಯಲ್ಲಿ ಇರಬೇಕು.
    ಸ್ಮೋಕಿಂಗ್ ಏರಿಯಾ ಅಂತ ನಾಮಫಲಕ ದೊಡ್ಡದಾಗಿ ಇರಬೇಕು. 60-30ರ ನಿಯಮದಲ್ಲಿ ಅಕ್ಷರಗಳು ಇರಬೇಕು.
    ಸ್ಮೋಕಿಂಗ್‌ ಝೂನ್‌ಗಳಲ್ಲಿ ಏರ್‌ ಫ್ಲೋ ಸಿಸ್ಟಂ ಇರಬೇಕು. ಯಾವುದೇ ಕಾರಣಕ್ಕೂ ಧೂಮಪಾನದ ಹೊಗೆಪಕ್ಕದ ಮನೆ ಅಥವಾ ಪಕ್ಕದ ಕಟ್ಟಡಗಳಿಗೆ ಹೋಗಬಾರದು ಎಂದು ಉಲ್ಲೇಖಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇವರ ಘನಂದಾರಿ ಕೆಲ್ಸದಿಂದ ನಾಳೆ ಬೇಕಾದ್ರು ಮನೆಗೆ ಹೋಗ್ಬೋದು: ಡಿಕೆಶಿಗೆ ಡಿಚ್ಚಿ ಕೊಟ್ಟ ಎಚ್‌ಡಿಕೆ