ಕೊರೊನಾದಿಂದಾಗಿ 144 ಸೆಕ್ಷನ್ ಜಾರಿಯಲ್ಲಿದ್ದರೆ, ಈ ಜಿಲ್ಲೆಯ ಜನರು ಮಾತ್ರ ಮನೆಯಿಂದ ಹೊರಬರದಂತೆ ಇದ್ದಾರೆ. ಜಿಲ್ಲಾಡಳಿತದ ವಿನೂತನ ಕ್ರಮ ಇಲ್ಲಿ ಸಕ್ಸಸ್ ಆಗಿದೆ.
ರೈತರಿಂದ ನೆರವಾಗಿ ಜನರ ಮನೆ ಬಾಗಿಲಿಗೆ ತಾಜಾ ತರಕಾರಿ ತಲುಪಿಸುವುರೊಂದಿಗೆ ಜನರು ಮನೆಯಿಂದ ಹೊರಗೆ ಬರದಂತೆ ತಡೆದಿದೆ ಕೊಪ್ಪಳ ಜಿಲ್ಲಾಡಳಿತ.
ಕೋವಿಡ್ 19 ಸೋಂಕು ಹರಡಂತೆ ತಡೆದು ಜನರ ಮೆಚ್ಚಿಗೆ ಪಾತ್ರವಾಗಿದೆ. ಜನರು ಮನೆಯಿಂದ ಹೊರಗೆ ಬರದಂತೆ ಹೇರಿರುವ ನಿರ್ಭಂದಕ್ಕೆ ಕೊಪ್ಪಳ ಜಿಲ್ಲೆಯಲ್ಲಿ ಜನರು ಕೈ ಜೋಡಿಸಿದ್ದಾರೆ. 12 ಜನರನ್ನು ಮನೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಿದೇರ್ಶನದಂತೆ ಸೂಚಿಸಿದೆ. ಅದರಲ್ಲಿ ಯಾವುದೇ ತೊಂದರೆಯಾಗದ ರೀತಿಯಲ್ಲಿ ನೋಡಿಕೊಂಡಿದೆ ಜಿಲ್ಲಾಡಳಿತ.
ತೋಟಗಾರಿಕೆ ಇಲಾಖೆಯವರ ಸಹಕಾರದೊಂದಿಗೆ ರಾಜ್ಯದಲ್ಲಿ ಮೊದಲ ಬಾರಿಗೆ ತರಕಾರಿಗಳನ್ನು ಜನರ ಮನೆ ಬಾಗಿಲಿಗೆ 144 ಸೆಕ್ಷನ್ ಜಾರಿಯನ್ನು ಮುರಿಯದಂತೆ ಕೆಲಸ ನಿರ್ವಹಿಸಲಾಗುತ್ತಿದೆ. ಜನರಿಗೆ ಬೇಕಾದ ಮೂಲಭೂತ ವಸ್ತುಗಳನ್ನು ಜಿಲ್ಲಾಡಳಿತ ವ್ಯವಸ್ಥಿತವಾಗಿ ತಲುಪಿಸುತ್ತಿದೆ.