Publish Date: Sat, 28 Mar 2020 (16:16 IST)
Updated Date: Sat, 28 Mar 2020 (16:18 IST)
ರಾಮನಗರ ಜಿಲ್ಲೆಯ ಜನರು ತಮ್ಮಮನೆಗಳಿಂದ ಹೊರಗಡೆ ಕಾಲಿಡಬಾರದು.
ಹೀಗಂತ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ಕೋವಿಡ್-19 ಕೊರೋನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಠಿಯಿಂದ 21 ದಿನಗಳು ಮನೆಯ ಒಳಗೆ ಇರುವಂತೆ ತಿಳಿಸಲಾಗಿದೆ. ಸಾರ್ವಜನಿಕರು ಮನೆಯಲ್ಲಿಯೇ ಇದ್ದು ಆರೋಗ್ಯ ಕಪಾಡಿಕೊಳ್ಳಿ ಎಂದಿದ್ದಾರೆ.
ಕೋವಿಡ್ -19 ಹರಡದಂತೆ ನೋಡಿಕೊಳ್ಳಲು ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಅವರು ಪ್ರತಿ ದಿನ ಶ್ರಮ ಪಡುತ್ತಿದ್ದಾರೆ. ಅವರ ಶ್ರಮವನ್ನು ಅರ್ಥ ಮಾಡಿಕೊಳ್ಳಿ. ಅತೀ ಜರೂರು ಕೆಲಸ ಇದ್ದರೆ ಮಾತ್ರ ಮನೆಯಿಂದ ಹೊರಗೆ ಬನ್ನಿ.
ಕೊರೋನಾ ವೈರಸ್ ಸೋಂಕಿಗೆ ಯಾವುದೇ ಔಷಧಿ ಇಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡು, ರೋಗ ತಡೆಗಟ್ಟಬಹುದು ಎಂದರು.