ಲಾಕ್ ವಿಸ್ತರಣೆ ಹಾಗೂ ಸಡಿಲಿಕೆ ಹೊರತಾಗಿಯೂ ಈ ಜಿಲ್ಲೆಯಲ್ಲಿ ಖಾಸಗಿ ಬಸ್, ಸರಕಾರಿ ಬಸ್ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ.
ಇನ್ನು, ಲಾಕ್ ಡೌನ್ ಸಡಿಲಿಕೆ ಆಯಿತು ಅಂತ ದಿನಾಲೂ ಕುಡಿಯಬೇಕು ಎಂದುಕೊಂಡಿದ್ದ ಕುಡುಕರ ಆಸೆಗೂ ಕೊಂಚ ಬ್ರೇಕ್ ಬಿದ್ದಿದೆ.
ಭಾನುವಾರ, ಸೋಮವಾರ, ಬುಧವಾರ ಹಾಗೂ ಶುಕ್ರವಾರದಂದು ಮಾತ್ರ ಕೊಡಗು ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮದ್ಯವನ್ನು ಪಾರ್ಸಲ್ ಪಡೆದುಕೊಂಡು ಗ್ರಾಹಕರು ಹೋಗಬಹುದಾಗಿದೆ. ವಾರದಲ್ಲಿ ನಾಲ್ಕು ದಿನ ಆಟೋ, ಟ್ಯಾಕ್ಸಿ ಓಡಾಟಕ್ಕೆ ಅವಕಾಶ ನೀಡಲಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಜನ ಮಾಸ್ಕ್ ಧರಿಸುವುದು ಕಡ್ಡಾಯ. ಮನೆಯಿಂದ ಹೊರಬರುವಾಗ ಮಾಸ್ಕ್ ಇಲ್ಲದಿದ್ದರೆ 100 ರೂ. ದಂಡ ವಿಧಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.