Publish Date: Tue, 26 Nov 2019 (10:29 IST)
Updated Date: Tue, 26 Nov 2019 (10:30 IST)
ಮೈಸೂರು : ಜೆಡಿಎಸ್ ನವರು ಕೋತಿಯಂತೆ ಮರದಿಂದ ಮರಕ್ಕೆ ಜಿಗಿಯುತ್ತಲೇ ಇರುತ್ತಾರೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹುಣಸೂರಿನಲ್ಲಿ ತಮ್ಮ ಅಭ್ಯರ್ಥಿ ಪರ ಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಅವರು, ಜೆಡಿಎಸ್ ನವರು ಕೋತಿಯಂತೆ ಒಂದು ಕಡೆ ಇರೋದೇ ಇಲ್ಲ. ಮರದಿಂದ ಮರಕ್ಕೆ ಜಿಗಿಯುತ್ತಲೇ ಇರುತ್ತಾರೆ. ಬೆಳಿಗ್ಗೆ ಒಂದು ಮಾತು, ಸಂಜೆಗೆ ಒಂದು ಮಾತು . ಇಂತಹ ಜೆಡಿಎಸ್ ನವರನ್ನು ಕಟ್ಟಿಕೊಂಡು ನಾವೆಲ್ಲೋಗಿ ಸಾಯೋಣ ಎಂದು ಕಿಡಿಕಾರಿದ್ದಾರೆ.
ಅಲ್ಲದೇ ನಮ್ಮ ಜೊತೆ ಇರಿ ಚೆನ್ನಾಗಿ ನೋಡಿಕೊಳ‍್ಳುತ್ತೇವೆ ಎಂದರೂ ಜೆಡಿಎಸ್ ನವರು ಇರಲ್ಲ. ಅವರ ಜೊತೆಗಾದರೂ ಹೋಗಿ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದರೂ ಕೇಳಲ್ಲ. ಇಂತವರಿಗೆ ಈ ಚುನಾವಣೆಯಲ್ಲಿ ಪಾಠ ಕಲಿಸಬೇಕು. ಬಿಜೆಪಿ ಜೊತೆಗೆ ಜೆಡಿಎಸ್ ನವರನ್ನು ತಿರಸ್ಕರಿಸಿ ಎಂದು ಮತದಾರರಿಗೆ ಕರೆ ನೀಡಿದ್ದಾರೆ.