Publish Date: Tue, 26 Nov 2019 (09:41 IST)
Updated Date: Tue, 26 Nov 2019 (09:44 IST)
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಉಪಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರ ಮೇಲೆ ತೃಣ ಮೂಲ ಕಾಂಗ್ರೆಸ್ ಕಾರ್ಯಕರ್ತರು ಕಾಲಿನಿಂದ ಒದ್ದು ಹಲ್ಲೆ ಮಾಡಿದ ಘಟನೆ ನಾಡಿಯಾ ಜಿಲ್ಲೆಯ ಘಿಯಾಘಾಟ್ ನ ಇಸ್ಲಾಂಪುರ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಕೆಲವರು ಮತದಾನದ ವೇಳೆ ಮತದಾರರನ್ನು ಓಲೈಸಲು ಇಸ್ಲಾಂಪುರ ಪ್ರಾಥಮಿಕ ಶಾಲೆಯಲ್ಲಿ ಆಹಾರ ತಯಾರಿಸುತ್ತಿದ್ದರು ಎಂಬ ವಿಚಾರ ತಿಳಿದು ಕರಿಂಪೂರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೆ.ಪ್ರಕಾಶ್ ಮಜುಂದಾರ್ ಆ ಸ್ಥಳಕ್ಕೆ ಬಂದು ಅವರನ್ನು ಪ್ರಶ್ನಿಸಿದ್ದಾರೆ.
ಆವೇಳೆ ಅಲ್ಲಿದ್ದವರು ಪ್ರಕಾಶ್ ಮಜುಂದಾರ್ ಮೇಲೆ ಹಲ್ಲೆ ಮಾಡಿ ಕಾಲಿನಿಂದ ಒದ್ದು, ರಸ್ತೆಬದಿಯಲ್ಲಿರುವ ಪೊದೆಗೆ ತಳ್ಳಿದ್ದಾರೆ. ಇದನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಹಲ್ಲೆ ಮಾಡಿದವರು ತೃಣ ಮೂಲ ಕಾಂಗ್ರೆಸ್ ಕಾರ್ಯಕರ್ತರು ಎಂದು ಬಿಜೆಪಿ ಆರೋಪಿಸಿದೆ.
pavithra
Publish Date: Tue, 26 Nov 2019 (09:41 IST)
Updated Date: Tue, 26 Nov 2019 (09:44 IST)