ಇಂದಿನಿಂದ ಎರಡು ದಿನಗಳ ಬದಾಮಿ ಪ್ರವಾಸದಲ್ಲಿರುವ ಮಾಜಿ ಸಿದ್ದರಾಮಯ್ಯ ಕಂಪ್ಲೀಟ್ ಮೌನಕ್ಕೆ ಶರಣಾಗಿದ್ದಾರೆ. ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ಕ್ಷೀಪ್ರ ಬೆಳವಣಿಗೆಯಿಂದ, ಬದಾಮಿ ಶಾಸಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನನಗೆ ಟೈಮ್ ಇಲ್ಲ ಬಿಟ್ಟುಬಿಡಿ ಎನ್ನುವ ಸಬೂಬು ನೀಡಿ ಮಾಧ್ಯಮಗಳಿಂದ ದೂರ ಉಳಿಯುತ್ತಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯರ ಈ ನಡೆ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಹೀಗೆ ಹೇಳುತ್ತಾ ತಾಲೂಕಿನ ಗ್ರಾಮದಿಂದ ಗ್ರಾಮಕ್ಕೆ ಹೊರಟಿರುವ ಸಿದ್ದರಾಮಯ್ಯ, ಬದಾಮಿ ತಾಲ್ಲೂಕಿನ ಬಿ.ಎನ್.ಜಾಲಿಹಾಳ ಗ್ರಾಮಕ್ಕೆ ತೆರಳಿ, ಇತ್ತೀಚೆಗೆ ವಿದ್ಯುತ್ ತಗುಲಿ ಸಾವನ್ನಪ್ಪಿದ್ದ ಯುವಕ ರೈತ ಶರಣಪ್ಪ ಹಾದಿಮನಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ಈ ವೇಳೆ ಕುಟುಂಬಕ್ಕೆ ವೈಯಕ್ತಿಕ 50 ಸಾವಿರ ಸಹಾಯಧನ ನೀಡಿದ್ರು. ಅಲ್ಲದೇ ಈ ಗ್ರಾಮಕ್ಕೆ ಆಗಮಿಸುವ ವೇಳೆ, ಚರಂಡಿ ಶುಚಿ ಇಲ್ಲದ್ದನ್ನ ಕಂಡು, ಪಟ್ಟದಕಲ್ಲು ಗ್ರಾಮ ಪಂಚಾಯ್ತಿಯ ಪಿಡಿಓ ಅರ್ಜುನ್ ರನ್ನ ತರಾಟೆಗೆ ತೆಗೆದುಕೊಂಡ್ರು.
ಯೂ ಆರ್ ಸಸ್ಪೆಂಡೆಡ್, ತಲೆ ಹರಟೆ ಮಾಡಿದ್ರೆ ಮನೆಗೆ ಹೋಗಬೇಕಾಗುತ್ತೆ ಎಂದು ಪಿಡಿಓಗೆ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ರು. ಆ ಬಳಿಕ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಸಮರ್ಪಕವಾಗಿ ಕೆಲಸ ಮಾಡುವಂತೆ ತಾಕೀತು ಮಾಡಿದರು.