Publish Date: Mon, 11 Mar 2019 (16:27 IST)
Updated Date: Mon, 11 Mar 2019 (16:28 IST)
ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಅನಿವಾರ್ಯವಾಗಿ ಪ್ರಧಾನಿಯಾಗಬೇಕು. ಹೀಗಂತ ಮಾಜಿ ಸಿಎಂ ಹೇಳಿದ್ದಾರೆ.
ಎಸ್.ಎಂ.ಕೃಷ್ಣ ಈ ಹೇಳಿಕೆ ನೀಡಿದ್ದು, ನರೇಂದ್ರ ಮೋದಿಯವರು ಅನಿವಾರ್ಯವಾಗಿ ಮತ್ತೊಮ್ಮೆ ಈ ದೇಶದ ಪ್ರಧಾನಿ ಯಾಗಬೇಕು ಎಂದು ನಾನು ಬಯಸಿದ್ದೇನೆ. ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು.
ಹಾಗಾಗಿ ನಾನು ರಾಜ್ಯಾದ್ಯಂತ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳಲು ಬಯಸಿದ್ದೇನೆ. ಬೆಂಗಳೂರಿನ ಮೂರೂ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಪ್ರಬಲವಾದ ನೆಲೆ ಇದೆ. ಇಲ್ಲಿ ದೇವೇಗೌಡರು ಸೇರಿದಂತೆ ಯಾರೆ ಸ್ಪರ್ಧಿಸಿದ್ರೂ ಇಲ್ಲಿ ವ್ಯಕ್ತಿ ಮುಖ್ಯವಾಗಲ್ಲ. ಸಿದ್ದಾಂತದ ಆಧಾರದ ಮೇಲೆ ಚುನಾವಣೆ ನಡೆಯುತ್ತದೆ. ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಹೇಳಿದರು.
Jagadeesh
Publish Date: Mon, 11 Mar 2019 (16:27 IST)
Updated Date: Mon, 11 Mar 2019 (16:28 IST)