Publish Date: Mon, 11 Mar 2019 (16:22 IST)
Updated Date: Mon, 11 Mar 2019 (16:24 IST)
ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಕೈ ನಾಯಕರಿಗೆ ದೂರು ಸಲ್ಲಿಕೆಯಾಗಿದೆ.
ಡಿಕೆಶಿ ವಿರುದ್ಧ ದೂರು ನೀಡಿದ ಮಂಡ್ಯದ ಕೈ ನಾಯಕ್ರು ಗಮನ ಸೆಳೆದಿದ್ದಾರೆ. ಮಂಡ್ಯ ಕಾಂಗ್ರೆಸ್ ಮುಖಂಡರ ಸಭೆ ಡಿಕೆಶಿ ಕರೆದಿದ್ದೇಕೆ ? ಎಂದು ಮುಖಂಡರು ಪ್ರಶ್ನೆ ಮಾಡಿದ್ದಾರೆ.
ನಾವು ಸಭೆಗೆ ಹೋದರೂ ಕಷ್ಟ ಹೋಗದಿದ್ದರೂ ಕಷ್ಟ ಎಂಬಂತಾಗಿದೆ. ಡಿಕೆಶಿಗೆ ಸಭೆ ಕರೆಯುವಂತೆ ನೀವು ಸೂಚನೆ ಕೊಟ್ಟಿದ್ರಾ ? ಎಂದು ಪಕ್ಷದ ವರಿಷ್ಠರನ್ನೇ ಕೆಣಕಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಗೆ ದೂರನ್ನು ಮುಖಂಡರು ನೀಡಿದ್ದಾರೆ.
ಚೆಲುವರಾಯಸ್ವಾಮಿ, ರಮೇಶ ಬಂಡಿಸಿದ್ದೇಗೌಡ, ನರೇಂದ್ರಸ್ವಾಮಿ, ಚಂದ್ರಶೇಖರರಿಂದ ದೂರು ನೀಡಲಾಗಿದೆ.
ಡಿಕೆ ಶಿವಕುಮಾರ್ ಪಕ್ಷದ ಮುಖಂಡರ ಅನತಿಯಂತೆ ಸಭೆ ಕರೆದಿಲ್ಲ. ಬದಲಾಗಿ ಜೆಡಿಎಸ್ ವರಿಷ್ಠ ದೇವೇಗೌಡರ ಸೂಚನೆಯಂತೆ ಸಭೆ ಕರೆದಿದ್ದಾರೆ. ಇವರೇನೂ ಜೆಡಿಎಸ್ ಪಕ್ಷದ ಏಜೆಂಟರೇ ? ಎಂದು ದೂರು ನೀಡಿದ್ದಾರೆ.
Jagadeesh
Publish Date: Mon, 11 Mar 2019 (16:22 IST)
Updated Date: Mon, 11 Mar 2019 (16:24 IST)