ರಸ್ತೆಗಳಲ್ಲಿ ರಾರಾಜಿಸುತ್ತಿರೋ ಫ್ಲೆಕ್ಸ್
Publish Date: Tue, 18 Jul 2023 (12:50 IST)
Updated Date: Tue, 18 Jul 2023 (13:23 IST)
ಮಹಾಘಟಬಂಧನ್ ಸಭೆಯಿಂದ ರಸ್ತೆಗಳಲ್ಲಿ ಫ್ಲೆಕ್ಸ್ ರಾರಾಜಿಸುತ್ತಿದೆ.ಬಿಹಾರ ಸಿಎಂಗೆ ನೆಗೆಟೀವ್ ಫ್ಲೆಕ್ಸ್ ಮೂಲಕ ಸ್ವಾಗತಮಾಡಲಾಗಿದೆ.ಬಿಹಾರದಲ್ಲಿ ಕಟ್ಟಲಾಗಿದ್ದ ಸುಲ್ತಾನಗಂಜ್ ಬ್ರಿಡ್ಜ್ ಮುರಿದುಬಿದ್ದಿತ್ತು.ಅದನ್ನೇ ಎತ್ತಿ ಹಿಡಿದು ಕಿಡಿಗೇಡಿಗಳು ಫ್ಲೆಕ್ಸ್ ಹಾಕಿದ್ದಾರೆ.ಬ್ರಿಡ್ಜ್ ನೋಡಿಕೊಳ್ಳಲಾಗದವರು ಪ್ರಧಾನಿಯಾಗ್ತಾರಾ ಅಂತ ಟೀಕೆ ಮಾಡಿದ್ದು,ಅಸ್ಥಿರ ಪ್ರಧಾನಮಂತ್ರಿ ಸ್ಪರ್ಧಿ ಅಂತ ಟೀಕೆ ಮಾಡಲಾಗಿದೆ.ಹಿಂದೆ ಬಿಜೆಪಿಗೆ Pay ಸಿಎಂ ಹಾಗೂ 40% ಸರ್ಕಾರ ಅಂತ ಪೋಸ್ಟರ್ ಕಿಡಿಗೇಡಿಗಳು ಅಂಟಿಸಿದ್ದರು.ಅದೇ ರೀತಿ ಈಗ ಮಹಾಘಟಬಂಧನ್ ಬಂದವರಿಗೂ ನೆಗೆಟೀವ್ ಪೋಸ್ಟರ್ ಹಾಕಿ ಸ್ವಾಗತ ಮಾಡಲಾಗ್ತಿದೆ
ಮುಂದಿನ ಸುದ್ದಿ