Select Your Language

Notifications

webdunia
webdunia
webdunia
webdunia

ಬೀಚ್‌ನಲ್ಲಿ ನಿಗೂಢ ವಸ್ತು ಪತ್ತೆ !

ಬೀಚ್‌ನಲ್ಲಿ ನಿಗೂಢ ವಸ್ತು ಪತ್ತೆ !
ಆಸ್ಟ್ರೇಲಿಯಾ , ಮಂಗಳವಾರ, 18 ಜುಲೈ 2023 (12:34 IST)
ಕ್ಯಾನ್ಬೆರಾ : ಕಳೆದ ಶುಕ್ರವಾರವಷ್ಟೇ ಚಂದ್ರಯಾನ-3ರ ರಾಕೆಟ್ ಉಡಾವಣೆಯಾಗಿತ್ತು. ಭಾರತದ ಐತಿಹಾಸಿಕ ಕ್ಷಣವನ್ನು ವಿಶ್ವವೇ ನಿಬ್ಬೆರಗಾಗಿ ವೀಕ್ಷಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾದ ಪಶ್ಚಿಮ ಭಾಗದ ಗ್ರೀನ್ ಹೆಡ್ ಕರಾವಳಿ ಪ್ರದೇಶದಲ್ಲಿ ನಿಗೂಢ ವಸ್ತುವೊಂದು ಪತ್ತೆಯಾಗಿದೆ.
 
ಈ ವಸ್ತು ಚಂದ್ರಯಾನ-3ಕ್ಕೆ ಸಂಬಂಧಪಟ್ಟಿರಬಹುದೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಚಂದ್ರಯಾನ-3 ಮಿಷನ್ ಅನ್ನು ಭಾರತದ ಅತ್ಯಂತ ಭಾರವಾದ ರಾಕೆಟ್, ಲಾಂಚ್ ವೆಹಿಕಲ್ ಮಾರ್ಕ್-III ಅನ್ನು ಇತ್ತೀಚೆಗೆ ಉಡಾವಣೆ ಮಾಡಲಾಗಿದೆ. ರಾಕೆಟ್ ಉಡಾವಣೆಯಾದ ಬಳಿಕ ಅದು ರಾತ್ರಿ ವೇಳೆ ಆಸ್ಟ್ರೇಲಿಯಾದ ಆಕಾಶದಲ್ಲೂ ಪ್ರಕಾಶಮಾನವಾಗಿ ಕಂಡುಬಂದಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಇದೀಗ ಆಸ್ಟ್ರೇಲಿಯಾದ ಬೀಚ್ನಲ್ಲಿ ಪತ್ತೆಯಾಗಿರುವ ನಿಗೂಢ ವಸ್ತು ಚಂದ್ರಯಾನ-3ಕ್ಕೆ ಸಂಬಂಧಪಟ್ಟಿರುವ ಸಾಧ್ಯತೆಯಿದೆ ಎನ್ನಲಾಗಿದೆ. ರಾಕೆಟ್ ಉಡಾವಣೆಯಾದ ಬಳಿಕ ಅದರಿಂದ ಕಳಚಿಕೊಂಡ ಎಲ್ವಿಎಂ-3ರ ಹಂತಗಳಲ್ಲಿ ಒಂದಾಗಿರಬಹುದು ಎಂದು ಊಹಿಸಲಾಗುತ್ತಿದೆ. 

ಆದರೂ ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ ಈ ನಿಗೂಢ ವಸ್ತು ಏನು ಎಂಬುದನ್ನು ದೃಢಪಡಿಸಿಲ್ಲ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಕೂಡಾ ಇಲ್ಲಿವರೆಗೆ ಈ ಬಗ್ಗೆ ಯಾವ ಮಾಹಿತಿಯನ್ನೂ ನೀಡಿಲ್ಲ. ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ ತನ್ನ ಕರಾವಳಿ ಪ್ರದೇಶದಲ್ಲಿ ಪತ್ತೆಯಾಗಿರುವ ವಸ್ತುವಿನ ಬಗ್ಗೆ ವಿಚಾರಣೆ ನಡೆಸುತ್ತಿದೆ ಎಂದು ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರೀ ಮಳೆಗೆ ಸಿಲುಕಿಕೊಂಡ ಹೆಚ್ಚು ಲೋಡೆಡ್ ಟ್ರಕ್‌ಗಳು