Publish Date: Mon, 20 Dec 2021 (21:37 IST)
Updated Date: Mon, 20 Dec 2021 (21:39 IST)
ಬೆಂಗಳೂರು:ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿನ ಪ್ರಕರಣ ದಿನೇ ದಿನೇ ಹೆಚ್ಚುತ್ತಿದೆ. ಮತ್ತೆ 5 ಹೊಸ ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.
ರಾಜ್ಯದಲ್ಲಿ ಕೋವಿಡ್ -19 ರ ಒಮಿಕ್ರಾನ್ ರೂಪಾಂತರದ ಐದು ಹೊಸ ಪ್ರಕರಣಗಳು ದೃಢಪಟ್ಟಿವೆ.
ಐವರು ರೋಗಿಗಳು ಧಾರವಾಡ, ಭದ್ರಾವತಿ, ಉಡುಪಿ ಮತ್ತು ಮಂಗಳೂರಿನವರು ಎಂದು ಕರ್ನಾಟಕ ಆರೋಗ್ಯ ಸಚಿವ ಡಾ.ಸುಧಾಕರ್ ಕೆ. ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಅವರು ಡಿ.19ರಂದು ಈ ಹೊಸ ಪ್ರಕರಣಗಳು ಪತ್ತೆಯಾಗಿವೆ. ಧಾರವಾಡದಲ್ಲಿ 54 ವರ್ಷದ ಪುರುಷ, ಭದ್ರಾವತಿಯಲ್ಲಿ 20 ವರ್ಷದ ಯುವತಿ, ಉಡುಪಿಯಲ್ಲಿ 82 ವರ್ಷದ ಪುರುಷ ಮತ್ತು 72 ವರ್ಷದ ಮಹಿಳೆ ಹಾಗೂ ಮಂಗಳೂರಿನಲ್ಲಿ 19 ವರ್ಷದ ಯುವತಿಗೆ ಓಮಿಕ್ರಾನ್ ತಗುಲಿದೆ ಎಂಬ ಮಾಹಿತಿಯನ್ನು ಸಚಿವ ಸುಧಾಕರ್ ತಿಳಿಸಿದ್ದಾರೆ.