Webdunia - Bharat's app for daily news and videos

Install App

ಮೊದಲ ಹಂತದ ಜನಗಣತಿ: NPR ದತ್ತಾಂಶ ಸಂಗ್ರಹ ಸೆಪ್ಟೆಂಬರ್ ತನಕ ಮುಂದೂಡಿಕೆ

Webdunia
ಬುಧವಾರ, 5 ಜನವರಿ 2022 (19:20 IST)
ಮೊದಲ ಹಂತದ ಜನಗಣತಿ ಮತ್ತು  ರಾಷ್ಟ್ರೀಯ ಜನಸಂಖ್ಯೆ ನೋಂದಣಿ -ಎನ್ ಪಿ ಆರ್ ಪರಿಷ್ಕರಿಸಲು  ದತ್ತಾಂಶ ಸಂಗ್ರಹಿಸುವ ಪ್ರಕ್ರಿಯೆಯನ್ನು ಸೆಪ್ಟೆಂಬರ್ ವರೆಗೆ ಮುಂದೂಡಲಾಗಿದೆ.
ಜಿಲ್ಲೆ, ಉಪ ಜಿಲ್ಲೆ, ತೆಹ್ಸಿಲ್, ತಾಲೂಕು, ಪೊಲೀಸ್ ಠಾಣೆ ವ್ಯಾಪ್ತಿ ಇವೆಲ್ಲವುಗಳ ಗಡಿಗಳನ್ನು 2022ರ ಜೂನ್ ವರೆಗೆ ನಿರ್ಬಂಧಿಸುವಂತೆ ಡಿಸೆಂಬರ್ ನಲ್ಲಿ ರಾಜ್ಯಗಳಿಗೆ ಭಾರತೀಯ ನೋಂದಣಿ ಜನರಲ್ -ಆರ್ ಜಿ ಐ ಮಾಹಿತಿ ನೀಡಿದ್ದರು.
ಜನಗಣತಿಯನ್ನು ನಡೆಸುವ ಕನಿಷ್ಠ ಮೂರು ತಿಂಗಳ ಮೊದಲು ಆಡಳಿತ ಘಟಕಗಳ ಗಡಿ ಮಿತಿಗಳನ್ನು ಸ್ಥಗಿತಗೊಳಿಸಬೇಕಾಗುತ್ತದೆ. ಆರ್ ಜಿಐ ಜೂನ್ ನಲ್ಲಿ ಗಡಿಗಳನ್ನು ಮತ್ತೆ ಸ್ಥಗಿತಗೊಳಿಸಲು ಆದೇಶ ಹೊರಡಿಸಿದರೂ, ಸೆಪ್ಟೆಂಬರ್ ನಲ್ಲಿ ಮಾತ್ರ ಈ ಪ್ರಕ್ರಿಯೆ ನಡೆಯಬಹುದು.
ಪ್ರತಿ ಅಂತರ ವಲಯ ಮತ್ತು ಸತತ ಎರಡು ಹಂತದ ಜನಗಣತಿ ದಾಖಲಾತಿಗಳನ್ನು ತುಲನೆ ಮಾಡಿ ಪರಿಷ್ಕರಿಸುವ ಕೆಲಸ ಭಾರೀ ಎಚ್ಚರಿಕೆಯಿಂದ ಆಗಬೇಕಾಗುತ್ತದೆ. 2021ರ ಜೂನ್ ವರೆಗೆ ದತ್ತಾಂಶ ಒಟ್ಟುಗೂಡಿಸುವ ಕೆಲಸ ನಡೆದಿದ್ದು, ವಲಯ ಜಿಲ್ಲೆಗಳ ಸಂಖ್ಯೆಯು 640ರಿಂದ 736ಕ್ಕೆ ಏರಿಕೆಯಾಗಿತ್ತು.
ಸಹ ಜಿಲ್ಲೆಗಳ ಸಂಖ್ಯೆಯು 5,925ರಿಂದ 6,754ಕ್ಕೆ, ಶಾಸನಬದ್ಧ ಜಿಲ್ಲೆಗಳ ಸಂಖ್ಯೆಯು 4,041ರಿಂದ 4,657ಕ್ಕೆ, ಜನಗಣತಿ ನಗರಗಳು 3,892ರಿಂದ 5,050ಕ್ಕೆ ಹೆಚ್ಚಿದರೆ, ಹಳ್ಳಿಗಳ ಸಂಖ್ಯೆಯು 2011ರಲ್ಲಿ 6,40,934ರಿಂದ 6,39,083ಕ್ಕೆ ಇಳಿದಿದೆ.
2021ರ ಜನಗಣತಿಯ ಮೊದಲ ಹಂತವು 2020ರ ಏಪ್ರಿಲ್ – ಸೆಪ್ಟೆಂಬರ್ ನಡುವೆ ಮನೆ ಮನೆ ಗಣತಿಯ ಮೂಲಕ ನಡೆಯಲು ಎನ್ ಪಿ ಆರ್ ಯೋಜಿಸಿತ್ತು. ಆದರೆ ಕೋವಿಡ್ 19 ಸಾಂಕ್ರಾಮಿಕದ ಕಾರಣಕ್ಕೆ ಅದನ್ನು ಮುಂದೂಡಲಾಯಿತು. ಜನಗಣತಿಯ ಅಂತಿಮ ಹಂತವು ದಶಮಾಂಸದ ರೀತ್ಯಾ ಪ್ರತಿ ವ್ಯಕ್ತಿಯ ದಾಖಲೀಕರಣವು 2021ರ ಮಾರ್ಚ್ 5ರೊಳಗೆ ಮುಗಿಯಬೇಕಿತ್ತು.
ಜನವರಿ 1, 2020ರಿಂದ ಮಾರ್ಚ್ 31, 2021ರವರೆಗೆ ರಾಜ್ಯಗಳು ಹೊಸ ಆಡಳಿತಾತ್ಮಕ ಘಟಕಗಳನ್ನು ರಚಿಸುವುದರ ಮೇಲೆ ನಿಷೇಧವಿತ್ತು.
ಕೊರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ 2021ರ ಜನಗಣತಿ ಮೊದಲ ಹಂತದ ಕೆಲಸವನ್ನು ಮುಂದಿನ ಆದೇಶದವರೆಗೆ ಮುಂದೂಡುವಂತೆ 2020ರ ಜುಲೈನಲ್ಲಿ ಆರ್ ಜಿಐ ಸುತ್ತೋಲೆ ಕಳುಹಿಸಿತ್ತು. ಜನಗಣತಿ ಕೆಲಸ ಮುಂದೂಡಿಕೆ ಆಗುತ್ತಲೇ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೊಸ ಆಡಳಿತಾತ್ಮಕ ಘಟಕ ರಚಿಸಲು, ವಿಸ್ತರಿಸಲು, ಉನ್ನತೀಕರಿಸಲು ಮನವಿಗಳನ್ನು ಸಲ್ಲಿಸಿದವು.
ಆದರೆ ಗಡಿ ನಿರ್ಬಂಧವನ್ನು 2020ರ ಡಿಸೆಂಬರ್ 31ರವರೆಗೆ ಮುಂದುವರಿಸಲು ಭಾರತೀಯ ನೋಂದಣಿ ಜನರಲ್ ತೀರ್ಮಾನ ತೆಗೆದುಕೊಂಡರು. 
ಆದಾಗ್ಯೂ ಅದನ್ನು ಮತ್ತೆ ಡಿಸೆಂಬರ್ 31,2021ರವರೆಗೆ ವಿಸ್ತರಿಸಲಾಯಿತು.  ಇದೀಗ ಮತ್ತೆ ಜೂನ್ 30, 2022ರವರೆಗೆ ವಿಸ್ತರಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments