Publish Date: Fri, 12 Oct 2018 (18:33 IST)
Updated Date: Fri, 12 Oct 2018 (18:35 IST)
ಸಪ್ಲೈಯರ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಬಸವನಗುಡಿ ನಗರದಲ್ಲಿ ಘಟನೆ ನಡೆದಿದೆ.
ಮುಂಜಾನೆ 8.30 ಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದ ಸಿಲಿಂಡರ್ ಸ್ಪೋಟ ಗೊಂಡ ಪರಿಣಾಮ ಬೆಂಕಿ ಅವಘಡ ಸಂಭವಿಸಿದೆ.
ಸುಮಾರು 15 ಲಕ್ಷ ಮೌಲ್ಯದ ಸಪ್ಲೈಯರ ಸಾಮಾಗ್ರಿಗಳು ಸುಟ್ಟು ಬೂದಿಯಾಗಿವೆ.
ಬಸಯ್ಯ ವೆಂಕಟಾಪುರ ಅವರಿಗೆ ಸೇರಿದ ಅಮರೇಶ್ವರ ಸಪ್ಲೈಯರನಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಬೆಂಕಿ ನಂದಿಸಲು ತಡವಾಗಿ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಮಸ್ಕಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.