Publish Date: Sun, 05 Mar 2023 (13:51 IST)
Updated Date: Sun, 05 Mar 2023 (13:53 IST)
ಗದಗದ ಕಪ್ಪತ್ತಗುಡ್ಡದ ದಟ್ಟ ಅರಣ್ಯ ಪ್ರದೇಶದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದ ಸಸ್ಯ ಸಂಕುಲ ನಾಶವಾಗಿದೆ. ವಲಯ ಅರಣ್ಯಾಧಿಕಾರಿಗಳು ಹಾಗು ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟಿದ್ದಾರೆ.. ಅಂದಾಜು 25 ಹೆಕ್ಟೇರ್ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಪದೇ ಪದೇ ಹೀಗೆ ಬೆಂಕಿ ಕಾಣಿಸಿಕೊಳ್ತಿರೋದು ಆಕಸ್ಮಿಕವಾ ಅಥವಾ ಕಿಡಿಗೇಡಿಗಳ ದುಷ್ಕೃತ್ಯವಾ ಅಂತಾ ಈ ಭಾಗದ ಜನ್ರು ಮಾತಾಡಿಕೊಳ್ತಿದ್ದಾರೆ. ಅಲ್ಲದೇ ಅರಣ್ಯ ಇಲಾಖೆ ಕಪ್ಪತ್ತಗುಡ್ಡದ ರಕ್ಷಣೆಗೆ ಮುಂದಾಗಿ ಬೆಂಕಿಬೀಳುವ ಅವಘಡಗಳನ್ನ ತಡೆಯಬೇಕೆಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.