Publish Date: Sun, 05 Mar 2023 (13:47 IST)
Updated Date: Sun, 05 Mar 2023 (13:51 IST)
ಕಳ್ಳರು ಹಾಡಹಗಲೇ ಮನೆಗೆ ನುಗ್ಗಿ ದರೋಡೆ ಮಾಡಿರುವ ಘಟನೆ ಆನೇಕಲ್ನ ಲಕ್ಷ್ಮೀನಗರ ಬಡಾವಣೆಯಲ್ಲಿ ನಡೆದಿದೆ. ಲಕ್ಷ್ಮೀನಗರ ನಿವಾಸಿ ಭಾಗ್ಯಲಕ್ಷ್ಮಿ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ. ಓರ್ವ ಕಳ್ಳ ಮನೆಗೆ ನುಗ್ಗಿ ನಾಗೇಶ್ ಇದ್ದಾರಾ ಎಂದು ಕೇಳಿ ಚಾಕು ತೋರಿಸಿದ್ದಾನೆ.. ಅದಾದ ನಂತರ ಇನ್ನಿಬ್ಬರು ಕಳ್ಳರು ಎಂಟ್ರಿ ಕೊಟ್ಟಿದ್ದಾರೆ.. ಮನೆಯಲ್ಲಿದ್ದ ಕೀರ್ತನಾ ಎಂಬ ಯುವತಿಯ ಕೈಕಾಲು ಕಟ್ಟಿ ಹಣ ದೋಚಿ ಪರಾರಿಯಾಗಿದ್ದಾರೆ.. ಕಳ್ಳರ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಆನೇಕಲ್ ಪೊಲೀಸರು, ಕಳ್ಳರ ಸೆರೆಗೆ ಬಲೆ ಬೀಸಿದ್ದಾರೆ.