Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅರಣ್ಯದಲ್ಲಿ ಮತ್ತೆ ಬೆಂಕಿ ಅವಘಡ; ಅಧಿಕಾರಿಗಳ ಎಡವಟ್ಟು ಏನು?

ಅರಣ್ಯದಲ್ಲಿ ಮತ್ತೆ ಬೆಂಕಿ ಅವಘಡ; ಅಧಿಕಾರಿಗಳ ಎಡವಟ್ಟು ಏನು?
ದಕ್ಷಿಣ ಕನ್ನಡ , ಸೋಮವಾರ, 6 ಮೇ 2019 (13:11 IST)
ಅಧಿಕಾರಿಗಳ ಎಡವಟ್ಟಿನಿಂದಾಗಿ ಅರಣ್ಯಕ್ಕೆ ಬೆಂಕಿ ವ್ಯಾಪಿಸಿದ್ದು, ಅಪಾರ ಹಾನಿಗೆ ಕಾರಣವಾಗಿದೆ.

ದಕ್ಷಿಣ  ಕನ್ನಡ  ಜಿಲ್ಲೆಯ ಕಡಬ ತಾಲೂಕಿನ ಸುಂಕದಕಟ್ಟೆ ಗ್ರಾಮದ ಕೆ.ಎಫ್. ಡಿ.ಸಿ ರಬ್ಬರ್ ನಿಗಮದ ಅರಣ್ಯ ಪ್ರದೇಶಕ್ಕೆ ಬೆಂಕಿ ಆವರಿಸಿದೆ.

ರಬ್ಬರ್ ನಿಗಮ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ  ಮಧ್ಯಾಹ್ನ ಬಳಿಕ ಬೆಂಕಿ ಕಾಣಿಸಿಕೊಂಡು ಅರಣ್ಯಕ್ಕೆ ಹರಡಲಾರಂಭಿಸಿದೆ. 
ಈ ರೀತಿ ಬೆಂಕಿ ನಂದಿಸಲು ಪರದಾಡುವಂತಾಗಲು ಮುಖ್ಯ ಕಾರಣ ಕೆ.ಎಫ್.ಡಿ. ಸಿ ರಬ್ಬರ್ ನಿಗಮದ ಅಧಿಕಾರಿಗಳು ಎಂದು ಊರಿನವರು ದೂರುತ್ತಿದ್ದಾರೆ.

ಈ ಮೊದಲು ಇದೇ ರೀತಿ ಬೆಂಕಿ ಹತ್ತಿಕೊಂಡಾಗ ಸಾಮಾಜಿಕ ಕಳಕಳಿಯಿಂದ 150 ಜನ ಸಾರ್ವಜನಿಕರು ಬೆಂಕಿ ನಂದಿಸಲು ಕಷ್ಟ ಪಟ್ಟಿದ್ದರು. 
ಆಸಮಯದಲ್ಲಿ ತಡೆ ಬೇಲಿ ಕಿತ್ತು ಹೋಗಿದೆ ಎಂಬ ಕಾರಣ ಮುಂದಿಟ್ಟುಕೊಂಡು ರಬ್ಬರ್ ನಿಗಮದ ಅಧಿಕಾರಿಗಳು ಸಾರ್ವಜನಿಕರನ್ನು ತರಾಟೆಗೆ ತೆಗೆದುಕೊಂಡಿದ್ದರಂತೆ.

ಈ ವಿಚಾರಕ್ಕೆ ಕೆ.ಎಫ್.ಡಿ.ಸಿ. ರಬ್ಬರ್ ನಿಗಮದ ಅಧಿಕಾರಿಗಳ ಮೇಲೆ  ಬೇಸರಗೊಂಡ ಸಾರ್ವಜನಿಕರು ಈ ಬಾರಿ ಬೆಂಕಿ ಹತ್ತಿಕೊಂಡ ಸಂದರ್ಭದಲ್ಲಿ ಬೆಂಕಿ ನಂದಿಸಲು ಮುಂದಾಗಿಲ್ಲ ಎನ್ನಲಾಗಿದೆ. 

ರಬ್ಬರ್ ನಿಗಮದ ಅಧಿಕಾರಿಗಳ ವರ್ತನೆಯನ್ನು ಸಾರ್ವಜನಿಕರು ಖಂಡಿಸಿದ್ದು, ಬೆಂಕಿ ಆವರಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಬಿಟ್ಟು ಬೇರೆ ಹುಡುಗರೊಂದಿಗೆ ಪರಾರಿಯಾದ ಯುವತಿಯರು ; ತಂದೆ, ತಾಯಿ ಆತ್ಮಹತ್ಯೆ