ಬೆಂಗಳೂರು: ವಿಧಾನಸೌಧದ ಗೇಟಿನ ಬಳಿ ನಿಂತಿದ್ದ ಕಾರಲ್ಲಿ ಹಣ ಪತ್ತೆಯಾದ ಘಟನೆ ನಡೆದಿದೆ.
ವಕೀಲ ಸಿದ್ದಾರ್ಥ ಅವರ ಕಾರು ಬೆಂಗಳೂರು ವಿಧಾನಸೌಧದ ಗೇಟ್ ಬಳಿ ನಿಲ್ಲಿಸಿದ್ದು, ಅದರಲ್ಲಿ1.92 ಕೋಟಿ ಹಣ ಪತ್ತೆಯಾಗಿದೆ. ಸಿದ್ದಾರ್ಥ ಅವರ ಕಾರಲ್ಲಿ ಈ ಹಣ ಎಲ್ಲಿಂದ ಬಂತು ಎಂಬುದು ತಿಳಿದುಬಂದ್ದಿಲ್ಲ.
ವಿಧಾನಸೌಧ ಪೊಲೀಸರು ಈ ಪ್ರಕರಣ ತನಿಖೆ ನಡೆಸುತ್ತಿದ್ದು, ನಂತರ ಪ್ರಕರಣವನ್ನು ಐಟಿ ಇಲಾಖೆಗೆ ಹಸ್ತಾಂತರಿಸಿದರು . ಹಣದ ಮೂಲ ಪತ್ತೆಗಾಗಿ ಈ ಪ್ರಕರಣವನ್ನು ಐಟಿ ಇಲಾಖೆಗೆ ನೀಡಲಾಗಿದೆ. ಹೈಕೋರ್ಟ್ ನಿರ್ದೇಶನದ ಮೇರೆಗೆ ಈ ಹಸ್ತಾಂತರ ನಡೆದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ