Publish Date: Sat, 02 Feb 2019 (18:48 IST)
Updated Date: Sat, 02 Feb 2019 (18:51 IST)
ಸ್ವಂತ ಮನೆಗೆ ರಾತ್ರಿ ಬೈಕ್ ನಲ್ಲಿ ತೆರಳಿದ ವ್ಯಕ್ತಿಯೊಬ್ಬ ಬೆಳಗ್ಗೆ ಹೆಣವಾಗಿ ಪತ್ತೆಯಾಗಿದ್ದಾನೆ.
ಅನುಮಾನಸ್ಪದ ರೀತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಧರ್ಮಸ್ಥಳದ ಮುಡ್ರುಪಾಡಿಯಲ್ಲಿ ಘಟನೆ ನಡೆದಿದೆ.
ಬೈಕ್ ನಲ್ಲಿ ಕಿಲ್ಲೂರು ಸ್ವಂತ ಮನೆಯಿಂದ ಕಾರ್ಯತಡ್ಕ ಜಾಗಕ್ಕೆ ಹೋಗುತ್ತಿದ್ದ ಮಂಜಪ್ಪ (45) ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಮುಡ್ರುಪಾಡಿಯಲ್ಲಿ ಕಿಲ್ಲೂರಿನ ಮಂಜಪ್ಪನ ಶವ ಪತ್ತೆಯಾಗಿದೆ. ನಿನ್ನೆ ರಾತ್ರಿ ನಡೆದ ಘಟನೆ ಇದಾಗಿದ್ದು, ಇಂದು ಬೆಳಿಗ್ಗೆ ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.
ಮನೆಯವರು ಹುಡುಕಿದಾಗ ಮುಡ್ರುಪಾಡಿ ಬಳಿ ಹೊಂಡದಲ್ಲಿ ಮಂಜಪ್ಪನ ಶವ ಪತ್ತೆಯಾಗಿದೆ. ತಲೆಗೆ ಹೆಲ್ಮೆಟ್ ಹಾಕಿದ್ದರೂ ಸಹ ಮುಖಕ್ಕೆ ಗಾಯವಾಗಿರುವ ಗುರುತುಗಳು ಕಂಡುಬಂದಿವೆ. ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಇದಾಗಿದೆ.