Webdunia - Bharat's app for daily news and videos

Install App

ಬಸ್​​​ ಚಾಲಕ & ಬೈಕ್​ ಸವಾರನ ನಡುವೆ ಮಾರಾಮಾರಿ

Webdunia
ಶನಿವಾರ, 26 ನವೆಂಬರ್ 2022 (14:19 IST)
BMTC ಬಸ್​ ಚಾಲಕ ಬೈಕ್​ ಸವಾರನ ಮೇಲೆ ಹಲ್ಲೆ ಮಾಡಿರುವ ಘಟನೆ ನಿನ್ನೆ ಬೆಂಗಳೂರಿನ ಯಲಹಂಕ ಬಳಿ ನಡೆದಿದೆ. ಸಂದೀಪ್ ಹಲ್ಲೆಗೊಳಗಾದ ಬೈಕ್​ ಸವಾರ. ಯಲಹಂಕ ಬಳಿ ಸಂದೀಪ್ ತಮ್ಮ ಪತ್ನಿಯೊಂದಿಗೆ ತೆರಳುತ್ತಿದ್ದರು. ಈ ವೇಳೆ BMTC​ ಬಸ್​ವೊಂದು ಮತ್ತೊಂದು ಬಸ್​ನ್ನು ಓವರ್​ ಟೇಕ್​ ಮಾಡಲು ಯತ್ನಿಸಿದೆ. ಆಗ ಬೈಕ್​​ ಸವಾರ ಅಡ್ಡಿಪಡಿಸಿದನೆಂದು BMTC ಬಸ್​​ ಚಾಲಕ ಆನಂದ್, ಬೈಕ್​ ಸವಾರ ಸಂದೀಪನೊಂದಿಗೆ ಕಿರಿಕ್​ ತೆಗೆದಿದ್ದಾನೆ. ಈ ವೇಳೆ ಸಂದೀಪ, ಆನಂದ್​​​​ಗೆ ​ಮಧ್ಯದ ಬೆರಳು ತೋರಿಸಿದ್ದಾನೆ. ಇದಕ್ಕೆ ಕ್ರೋದಗೊಂಡ ಆನಂದ್​, ಸಂದೀಪ್​ನೊಂದಿಗೆ ಜಗಳಕ್ಕೆ ಇಳಿದಿದ್ದಾನೆ. ಗಲಾಟೆ ತಾರಕಕ್ಕೆ ಏರಿ ಚಾಲಕ ಆನಂದ್​ ಸಂದೀಪ್​ಗೆ ಮನಸೋ ಇಚ್ಛೆ ಥಳಿಸಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನೂ ಗಾಯಾಳು ಬೈಕ್​ ಸವಾರ ಸಂದೀಪ್​ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್​​ ಚಾಲಕ ಆನಂದ್​​ನನ್ನು ಅಮಾನತು ಮಾಡಿ BMTC ಆದೇಶ ಹೊರಡಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bengaluru Rains: ಗ್ರೇಟರ್ ಬೆಂಗಳೂರು ಅಲ್ಲ ಇದು ವಾಟರ್ ಬೆಂಗಳೂರು

ಸಿಲಿಕಾನ್‌ ಸಿಟಿಯಲ್ಲಿ ಮಹಾಮಳೆಗೆ ಮೊದಲ ಬಲಿ: ಗೋಡೆ ಕುಸಿದು ಮಹಿಳಾ ಉದ್ಯೋಗಿ ಸಾವು

ಬೆಂಗಳೂರು-ಕನಕಪುರ ರಸ್ತೆಯಲ್ಲಿ ಬಸ್ ಪಲ್ಟಿ: ಸಬ್‌ಇನ್ಸ್‌ಪೆಕ್ಟರ್‌ ಸೇರಿ ಇಬ್ಬರು ದಾರುಣ ಸಾವು

Arecanut price today: ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ಅಡಿಕೆ ಬೆಳೆಗಾರರಿಗೆ ನಿರಾಸೆ

Gold Price today: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಆತಂಕ

ಮುಂದಿನ ಸುದ್ದಿ
Show comments