Publish Date: Sat, 26 Nov 2022 (13:42 IST)
Updated Date: Sat, 26 Nov 2022 (15:33 IST)
ಕಬ್ಬಿನ ಬೆಂಬಲ ದರ ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ರೈತರು ಫ್ರೀಡಂಪಾರ್ಕ್ ನಲ್ಲಿ ಕಳೆದ ನಾಲ್ಕು ದಿನಗಳಿಂದ ಧರಣಿ ನಡೆಸಿದ್ದು, ಇಂದು ರೈತರು ಅಣುಕು ಶವಯಾತ್ರೆ ಮೂಲಕ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ಹೊರಹಾಕಿದರು. ಇನ್ನೂ ಪೋಲೀಸ್ ದಬ್ಬಾಳಿಕೆಗೆ ರೈತರು ಧಿಕ್ಕಾರ ಧಿಕ್ಕಾರ ಎಂದು ಆಕ್ರೋಶ ಹೊರಹಾಕಿದರು.ಇನ್ನೂ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದಂತೆ ಪ್ರತಿಭಟನಾ ನಿರತರನ್ನ ಖಾಕಿ ಪಡೆ ವಶಕ್ಕೆ ಪಡೆದಿದ್ದಾರೆ.