ದೇಶಾದ್ಯಂತ ಕಡ್ಡಾಯಗೊಂಡಿರುವ ಡಿಜಿಟಲ್ ಟೋಲ್ ಪಾವತಿ ವ್ಯವಸ್ಥೆ ಫಾಸ್ಟ್ ಟ್ಯಾಗ್ ಮೂಲಕ ಅಕ್ಟೋಬರ್ ನಲ್ಲಿ ದಾಖಲೆಯ ಮೊತ್ತ ಸಂಗ್ರಹವಾಗಿದೆ.
ಒಂದೇ ತಿಂಗಳಿನಲ್ಲಿ ಬರೋಬ್ಬರಿ 3,356 ಕೋಟಿ. ರೂ. ಸಂಗ್ರಹವಾಗಿದ್ದು, 21.42 ಕೋಟಿ ಜನರಿಂದ ಈ ವಹಿವಾಟು ನಡೆದಿದೆ. ಕಳೆದ ಶನಿವಾರ ಒಂದೇ ದಿನ ಬರೋಬ್ಬರಿ 122.81 ಕೋಟಿ ರೂ. ಟೋಲ್ ಶುಲ್ಕ ಸಂಗ್ರಹವಾಗಿದೆ.
ಸೆಪ್ಟೆಂಬರ್‌ನಲ್ಲಿ 19.36 ಕೋಟಿ ಜನರಿಂದ 3000 ಕೋಟಿ ರೂ. ಶುಲ್ಕ ಸರ್ಕಾರದ ಬೊಕ್ಕಸದಲ್ಲಿ ಸಂಗ್ರಹವಾಗಿದೆ. ಆಗಸ್ಟ್ ನಲ್ಲಿ 20.12 ಕೋಟಿ ಜನರಿಂದ 3,076.56 ಕೋಟಿ ರೂ. ಸಂಗ್ರಹವಾಗಿ ದಾಖಲೆ ಮಾಡಿತ್ತು.
ಫಾಸ್ಟ್‌ಟ್ಯಾಗ್ ಸ್ಕ್ಯಾನರ್ ಬಳಸುವುದರಿಂದ ಟೋಲ್‌ಗಳಲ್ಲಿ ವಾಹನ ಸಂಚಾರದ ವೇಗಗೊಳಿಸಲಿದೆ. ಸಂಚಾರದ ವೇಳೆ ನಿಗದಿತ ಶುಲ್ಕ ಆಟೋಮ್ಯಾಟಿಕ್ ಆಗಿ ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳಲಿದೆ.