Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

e-RUPIಗೆ ಮೋದಿ ಚಾಲನೆ; ಡಿಜಿಟಲ್ ಇಂಡಿಯಾ ಕ್ರಾಂತಿಗೆ ವಿಶ್ವವೇ ಬೆರಗು!

e-RUPIಗೆ ಮೋದಿ ಚಾಲನೆ; ಡಿಜಿಟಲ್ ಇಂಡಿಯಾ ಕ್ರಾಂತಿಗೆ ವಿಶ್ವವೇ ಬೆರಗು!
ನವದೆಹಲಿ , ಸೋಮವಾರ, 2 ಆಗಸ್ಟ್ 2021 (21:12 IST)
ನವದೆಹಲಿ(ಆ.02): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತದಲ್ಲಿ ಡಿಜಿಟಲ್ ಕ್ರಾಂತಿ ಮಾಡಿದೆ. ಭೀಮ್ ಆ್ಯಪ್, ಡಿಜಿ ಲಾಕರ್, ಕೋವಿನ್, NDHM, ಫಾಸ್ಟಾಗ್ ಸೇರಿ ಹಲವು ಡಿಜಿಟಲ್ ಪ್ಲಾಟ್ಫಾರ್ಮ್ ಅತ್ಯಂತ ಯಶಸ್ವಿಯಾಗಿದೆ. ಇದರ ಜೊತೆಗೆ ಇದೀಗ ಪ್ರಧಾನಿ ಮೋದಿ ಡಿಜಿಟಲ್ ಪಾವತಿ ಹಾಗೂ ಪಾವತಿಯಲ್ಲಿನ ಸೋರಿಕೆ ತಡೆಯಲು ಸುಲಭ ಹಾಗೂ ಸುರಕ್ಷಿತ e-RUPI (ಇ ರುಪಿ) ಪೇಮೆಂಟ್ಗೆ ಚಾಲನೆ ನೀಡಿದ್ದಾರೆ.

 ಡಿಜಿಟಲ್ ಕ್ರಾಂತಿಯಲ್ಲಿ ಅಮೆರಿ, ಚೀನಾಗಿಂತ ಭಾರತ ಮುಂಚೂಣಿಯತ್ತ ದಾಪುಗಾಲಿಟ್ಟಿದೆ. ಇದೀಗ ಮೋದಿ ಚಾಲನೆ ನೀಡಿರುವ e-RUPIದೇಶದ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಹಾಗೂ ಆಡಳಿತದಲ್ಲಿ ಮಹತ್ತರ ಬದಲಾವಣೆ ತರಲಿದೆ. ನೂತನ e-RUPIವೋಚರ್ ಆಧಾರಿತ ಪಾವತಿಯಾಗಿದೆ. ಹೀಗಾಗಿ ಅತ್ಯಂತ ಸುರಕ್ಷತವಾಗಿದೆ.
ಮತ್ತೊಂದು ವಿಶೇಷ ಅಂದರೆ e-RUPIಪಾವತಿಗೆ ಸ್ಮಾರ್ಟ್ಫೋನ್, ಇಂಟರ್ನೆಟ್ ಅವಶ್ಯಕತೆ ಇಲ್ಲ. ಬೇಸಿಕ್ ಮೊಬೈಲ್ ಸೆಟ್ ಬಳಕೆ ಮಾಡುವವರು e-RUPIಪಾವತಿ ವ್ಯವಸ್ಥೆ ಬಳಕೆ ಮಾಡಬಹುದು. ಕಾರಣ e-RUPIಪಾವತಿ ವ್ಯವಸ್ಥೆ QR code ಆಧಾರಿತ ಅಥವಾ ವೋಚರ್ ಆಧಾರಿತ ಪಾವತಿಯಾಗಿದೆ.
 e-RUPIಯಿಂದ ಸರ್ಕಾರದ ಸೌಲಭ್ಯಗಳು ನೇರವಾಗಿ ಫಲಾನುಭವಿಗಳಿಗೆ ತಲುಪಲಿದೆ. ಇಷ್ಟೇ ಅಲ್ಲ ಯಾವ ಕಾರಣಕ್ಕಾಗಿ ಈ ಹಣವನ್ನು ಫಲಾನುಭವಿಗಳಿಗೆ ನೀಡಲಾಗುತ್ತಿದೆಯೋ ಅದೇ ಕಾರಣಕ್ಕೆ ಬಳಸಲು ಮಾತ್ರ ಸಾಧ್ಯವಾಗಲಿದೆ. ಪಾವತಿ ವ್ಯವಸ್ಥೆಯಲ್ಲಿನ ಸೋರಿಕೆ, ದುರ್ಬಳಕೆ ತಪ್ಪಿಸಲು  e-RUPIಅತ್ಯಂತ ಮಹತ್ವದ್ದಾಗಿದೆ. ಇದೇ ಕಾರಣಕ್ಕೆ ದೇಶದ ಆಡಳಿತ ವ್ಯವಸ್ಥೆಯಲ್ಲೂ  e-RUPIಮಹತ್ತರ ಬದಲಾವಣೆ ತರಲಿದೆ.
ಆರಂಭಿಕ ಹಂತದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಅದರಲ್ಲೂ ಲಸಿಕೆಗೆ e-RUPIಪಾವತಿಗೆ ಅವಕಾಶ ಮಾಡಿಕೊಡಲಾಗಿದೆ. ಕೇಂದ್ರ ಸರ್ಕಾರ ಲಸಿಕೆ ಅಭಿಯಾನ ಆರಂಭಕ್ಕೂ ಮೊದಲು ಲಸಿಕೆಗಾಗಿ  e-RUPIಪಾವತಿ ವ್ಯವಸ್ಥೆ ಜಾರಿಗೆ ತರುವುದಾಗಿ ಹೇಳಿತ್ತು. ಅದರಂತೆ ಇದೀಗ  e-RUPIಪಾವತಿ ಜಾರಿಯಾಗಿದೆ.
 ಲಸಿಕೆ ಇ ವೋಚರ್ ಖರೀದಿಸಿ ಇತರರಿಗೆ ಗಿಫ್ಟ್ ನೀಡಬಹುದು. ಕ್ಯೂಆರ್ ಕೋಡ್ ಅಥವಾ ಎಸ್ಎಂಎಸ್ ವೋಚರ್ ಮೂಲಕ ಇತರರಿಗೆ ಲಸಿಕೆ ವೋಚರ್ ಕಳುಹಿಸಬಹುದು. ಈ ವೋಚರ್ ಪಡೆದ ವ್ಯಕ್ತಿ ಲಸಿಕೆಗಾಗಿ ಮಾತ್ರ e-RUPIವೋಚರ್ ಬಳಕೆ ಮಾಡಬಹುದು. ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ(NPCI)ಕೇಂದ್ರದ ಹಲವು ಇಲಾಖೆಗಳ ಸಹಕಾರದೊಂದಿಗೆ  e-RUPIಪೇಮೆಂಟ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಹಣಕಾಸು ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ನೂತನ  e-RUPIಪೇಮೆಂಟ್ ಜಾರಿಗೆ ನೆರವಾಗಿದೆ.
 ಕೇಂದ್ರ ಸರ್ಕಾರ ಭಾರತದಲ್ಲಿ ಡಿಜಿಟಲ್ ಇಂಡಿಯಾ ಅಭಿಯಾನದ ಮೂಲಕ ದೇಶದ ಹಲವು ಸಂಪ್ರದಾಯಕ್ಕೆ ಗುಡ್ಬೈ ಹೇಳಿ ಹೊಸ ಕ್ರಾಂತಿ ಮಾಡಿದೆ. ಈ ಮೂಲಕ ಆಡಳಿತದಲ್ಲಿ ಪಾರದರ್ಶಕತೆ, ಗ್ರಾಹಕರಿಗೆ ಸುಲಭ ಹಾಗೂ ತ್ವರಿತ ಆನ್ಲೈನ್ ವ್ಯವಸ್ಥೆಗಳು ಜಾರಿಯಾಗಿದೆ. ಭಾರತದಲ್ಲಿ ನಡೆಯುತ್ತಿರುವ ಡಿಜಿಟಲ್ ಕ್ರಾಂತಿ ವಿಶ್ವವನ್ನೇ ಬೆರಗುಗೊಳಿಸಿದೆ. 130ಕೋಟಿಗೂ ಅಧಿಕ ಜನಸಂಖ್ಯೆ, ಸಂಪೂರ್ಣ ಸಾಕ್ಷರತೆ ಕೊರತೆ ಸೇರಿದಂತೆ ಹಲವು ಅಡೆ ತಡೆಗಳ ನಡುವೆ ಭಾರತ ಅತ್ಯಂತ ಯಶಸ್ವಿಯಾಗಿ ಆಧುನೀಕರಣ ಹಾಗೂ ಡಿಜಿಟಲೀಕರಣಗೊಳ್ಳುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕುಂದಾಪುರ ಫೈನಾನ್ಸ್ ಮಾಲೀಕ ಕೊಲೆಗಾರ 24 ಗಂಟೆಯಲ್ಲಿ ಅರೆಸ್ಟ್!