ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಮೆಟ್ರೋ ಮಾರ್ಗದ ಕಾಮಗಾರಿ ಕೈಗೊಂಡಿದೆ. ಆದರೆ ಈ ಯೋಜನೆಯಲ್ಲಿ ಈಗ ಕೆಲವು ಬದಲಾವಣೆಯಾಗುವ ಸಾಧ್ಯತೆ ಇದೆ.
ಕಸ್ತೂರಿ ನಗರ, ಹೊರಮಾವು, ಹೆಚ್‌ಆರ್‌ಬಿಆರ್ ಲೇಔಟ್ (ಬಾನುಸಾಹೇಬ್ ಪಾಳ್ಯ), ಕಲ್ಯಾಣ ನಗರ, ಹೆಚ್‌ಬಿಆರ್ ಲೇಔಟ್, ನಾಗವಾರ, ವೀರಣ್ಣಪಾಳ್ಯ, ಕೆಂಪಾಪುರ, ಹೆಬ್ಬಾಳ, ಕೊಡಿಗೆಹಳ್ಳಿ, ಜಕ್ಕೂರು ಕ್ರಾಸ್, ಯಲಹಂಕ ಕ್ರಾಸ್ (ಕೋಗಿಲು ಕ್ರಾಸ್), ಬಾಗಲೂರು ಕ್ರಾಸ್, ಬೆಟ್ಟಹಲಸೂರು, ದೊಡ್ಡಜಾಲ, ಏರ್‌ಪೋರ್ಟ್ ಸಿಟಿ ಮತ್ತು ಕೆಐಎಲ್ ಟರ್ಮಿನಲ್ ನಿಲ್ದಾಣಗಳಿವೆ.
38.44 ಕಿ. ಮೀ. ಮಾರ್ಗವಿದು ಕೆ. ಆರ್. ಪುರ-ಹೆಬ್ಬಾಳ-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಒಟ್ಟು ಉದ್ದ 38. 44 ಕಿ. ಮೀ.ಯಾಗಿದೆ. ಈ ರೈಲು ಮಾರ್ಗದ ಒಟ್ಟು ವೆಚ್ಚ ಸುಮಾರು 2,200 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಈ ಮಾರ್ಗದ ಸಿವಿಲ್ ಮಾರ್ಗದ ಕಾಮಗಾರಿ ಟೆಂಡರ್ ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿ ಪಡೆದುಕೊಂಡಿದೆ. ಕಾಮಗಾರಿಯನ್ನು ಮೂರು ಭಾಗವಾಗಿ ವಿಂಗಡನೆ ಮಾಡಲಾಗಿದೆ. ಎಲ್ಲಾ ಪ್ಯಾಕೇಜ್‌ಗಳ ಗುತ್ತಿಗೆಯೂ ಇದೇ ಕಂಪನಿಗೆ ನೀಡಲಾಗಿದೆ.